More

    ಬಾಬಾ ರಾಮ​ದೇವ್ ಮತ್ತು ನಟ ಧನುಷ್ ಫೋಟೋ ವೈರಲ್; ಬಾಬಾ ರಾಮ​ದೇವ್ ಇದು ನೀವಾ? ಎಂದ ನೆಟ್ಟಿಗರು

    ನವದೆಹಲಿ: ಟಾಲಿವುಡ್ ಸ್ಟಾರ್ ನಟ ಧನುಷ್ ಅವರ ಹೊಚ್ಚ ಹೊಸ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಕುತೂಹಲ ಸೃಷ್ಟಿಸಿದೆ.

    ಇದನ್ನೂ ಓದಿ: VIDEO | ಹಣೆ ಮೇಲೆ ಪತಿಯ ಹೆಸರಿನ ಟ್ಯಾಟೂ ಹಾಕಿಸಿರುವುದು ನಿಜವೋ/ಸುಳ್ಳೋ? ಇಲ್ಲಿದೆ ಅಸಲಿ ಕಥೆ…

    ತಮ್ಮ ಮುಂದಿನ ಚಿತ್ರ ಕ್ಯಾಪ್ಟನ್ ಮಿಲ್ಲರ್ ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳಿದ್ದ ನಟ ಧನುಷ್, ಮುಂಬೈ ಏರ್ಪೋರ್ಟ್​ನಲ್ಲಿ ತಮ್ಮ ಅಭಿಮಾನಿಗಳಿಗೆ ಫೋಟೋ ನೀಡಲು ಮುಂದಾದರು. ಈ ವೇಳೆ ಅವರು ಕಾಣಿಸಿಕೊಂಡ ರೀತಿ ಬಹಳ ವಿಭಿನ್ನವಾಗಿದ್ದು, ಅವರ ಲುಕ್ ನೋಡಿ ಅಭಿಮಾನಿಗಳು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಟ ಧನುಷ್ ಲುಕ್ ನೋಡಿದ ಅಭಿಮಾನಿಗಳು ಕೂಡಲೇ ಅವರ ಫೋಟೋ ಕ್ಲಿಕ್ಕಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ನಟ ಧನುಷ್ ಅವರ ಹೊಸ ಲುಕ್​ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದೇ ತಡ, ನೆಟ್ಟಿಗರು ಅಭಿಪ್ರಾಯಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಧನುಷ್ ಕಪ್ಪು ಕೂಲಿಂಗ್ ಗ್ಲಾಸ್ ಧರಿಸಿ, ನೇರಳೆ ಬಣ್ಣದ ಶರ್ಟ್ ಧರಿಸಿದ್ದು, ಉದ್ದವಾದ ಗಡ್ಡ ಬಿಟ್ಟಿದ್ದರು. ಈ ಫೋಟೋ ನೋಡಿದ ನೆಟ್ಟಿಗರು ಬಾಬಾ ರಾಮ್​ದೇವ್ ಯಾವಾಗ ಈ ಅವತಾರ ಪಡೆದರು? ಬಾಬಾ ರಾಮ್​ದೇವ್ ನೀವು ಯಾವಾಗ ಈ ರೀತಿ ಕಾಣಲು ಪ್ರಾರಂಭಿಸಿದ್ದೀರಿ? ಇದು ನಿಜಕ್ಕೂ ನೀವೇನಾ? ಎಂದು ಲಘು ದಾಟಿಯಲ್ಲಿ ಕಮೆಂಟ್ ಮಾಡಿದ್ದಾರೆ. ಈ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಶೇರ್ ಮತ್ತು ಕಮೆಂಟ್​ಗಳನ್ನು ಪಡೆದುಕೊಂಡಿದೆ.

    ಇದನ್ನೂ ಓದಿ: ಕೀರ್ತಿ ಸುರೇಶ್ ಮದುವೆ ಆಗ್ತಿದ್ದಾರಾ? ನಟಿಯ ತಂದೆ ನೀಡಿದ ಸ್ಪಷ್ಟನೆ ಹೀಗಿದೆ…

    ಸದ್ಯ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳಿರುವ ನಟ ಧನುಷ್ ಸಖತ್ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ತಂದೆ ಮತ್ತು ಮಗನ ಪಾತ್ರಗಳಲ್ಲಿ ತಾವೇ ನಟಿಸಲಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts