ಕಾರ್ಕಳ: ಚೇತನಾ ವಿಶೇಷ ಶಾಲೆಯ ವಾಕ್ ಮತ್ತು ಶ್ರವಣ ಚಿಕಿತ್ಸಾ ಘಟಕದಲ್ಲಿ ಮಂಗಳೂರು ದೇರಳಕಟ್ಟೆ ಶ್ರವಣ ವಿಭಾಗ ಯೆನೆಪೋಯ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಇತ್ತೀಚೆಗೆ ವಾಕ್ ಮತ್ತು ಶ್ರವಣ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಸಂದೀಪ್ ಕುಡ್ವಾ ಉದ್ಘಾಟಿಸಿದರು. ಯೆನೆಪೋಯ ವಾಕ್ ಮತ್ತು ಶ್ರವಣ ವಿಭಾಗದ ಎಚ್‌ಒಡಿ ಶ್ವೇತಾ ಪ್ರಭು ವಿಶೇಷ ಚೇತನರ ಪಾಲಕರೊಂದಿಗೆ ಸಂವಾದ ನಡೆಸಿದರು. ಅಸಿಸ್ಟೆಂಟ್ ಪ್ರೊಫೆಸರ್ ಪ್ರಿಯಾಂಕಾ ನಾಯಕ್ ಹಾಗೂ ಪ್ರತೀಕ್ಷಾ ತಂಡ ವಾಕ್ ಮತ್ತು ಶ್ರವಣ ತಪಾಸಣೆ ಹಾಗೂ ಚಿಕಿತ್ಸೆ ನಡೆಸಿದರು.
ಭಾರತಿ ಸೇವಾ ಮಂಡಳಿ ಟ್ರಸ್ಟ್ ಕಾರ್ಯದರ್ಶಿ ರಘುನಾಥ್ ಶೆಟ್ಟಿ, ಕೋಶಾಧಿಕಾರಿ ವಿಜಯ್ ಕುಮಾರ್, ಫಿಸಿಯೋಥೆರಪಿ ವಿಭಾಗದ ಉಪಪ್ರಾಂಶುಪಾಲ ಅಸಿರ್ ಜೋನ್ ಸೋಲೋಮನ್ ಉಪಸ್ಥಿತರಿದ್ದರು. ಶಿಕ್ಷಕಿ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ವಿಜಯ್ ಕುಮಾರ್ ವಂದಿಸಿದರು.