

ಬೈಂದೂರು: ಉಪ್ಪುಂದ ನಾಡದೋಣಿ ಸಭಾಭವನದಲ್ಲಿ ಗುರುವಾರ ಮನುವಿಕಾಸ ಸಂಸ್ಥೆ ಹಾಗೂ ಸ್ಟೈಲ್ ಫೌಂಡೇಶನ್ ಸಂಯೋಗದಲ್ಲಿ ಮಹಿಳಾ ಸ್ವಸಹಾಯ ಸಂಘ ಸದಸ್ಯರಿಗೆ ಡಿಜಿಟಲ್ ಸಾಕ್ಷರತಾ ತರಬೇತಿ ಕಾರ್ಯಕ್ರಮ ನಡೆಯಿತು.
ಶಿರಶಿ ಮುನುವಿಕಾಸ ಸಂಸ್ಥೆ ನವೀನ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ್ಪುಂದ ಗ್ರಾಪಂ ಅಧ್ಯಕ್ಷ ಮೋಹನ್ಚಂದ್ರ ಮಾತನಾಡಿ, ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಡಿಜಿಟಲ್ ಸಾಕ್ಷರತೆ ಹೊಂದುವುದು ಅನಿವಾರ್ಯ ಎಂದರು.
ಆರ್ಥಿಕ ಸಾಕ್ಷರತಾ ಯೋಜನಾಧಿಕಾರಿ ಅರ್ಪಿತಾ, ಸಂಪನ್ಮೂಲ ವ್ಯಕ್ತಿ ಲೋಲಾಕ್ಷಿ ಖಾರ್ವಿ, ಮತ್ಸೃ ಸಿರಿ ಮಹಿಳಾ ಮೀನು ಉತ್ಪಾದಕರ ಮತ್ತು ಮತ್ಸೊೃೀದ್ಯಮ ಸಂಘ ಅಧ್ಯಕ್ಷೆ ನಾಗವೇಣಿ ಮೊಗವೀರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಾವತಿ ಖಾರ್ವಿ, ಆರ್ಥಿಕ ಸಾಕ್ಷರತಾ ಅಧಿಕಾರಿ ದಿವಾಕರ್ ಹಾಗೂ ಮೋಹನ್, ಸಿಆರ್ಪಿ ಮಮತಾ ಖಾರ್ವಿ ಹಾಗೂ 8 ಸಂಘ 41 ಸದಸ್ಯರು ಉಪಸ್ಥಿತರಿದ್ದರು.