

ಗಂಗೊಳ್ಳಿ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರ ಆಶ್ರಯದಲ್ಲಿ 2024ರಲ್ಲಿ ನಡೆದ ವಿಶೇಷ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯಲ್ಲಿ ಅನನ್ಯಾ ಆರ್.ಉಡುಪ ಹೆಮ್ಮಾಡಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಿರಿಯ ವಿಭಾಗದ ಪರೀಕ್ಷೆಯಲ್ಲಿ ಶೇ.88.75ರಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಲಾವಣ್ಯ ಶ್ರೀಧರ ಶೆಟ್ಟಿಗಾರ್ ತ್ರಾಸಿ ಅವರ ಶಿಷ್ಯೆಯಾಗಿದ್ದು, ಹೆಮ್ಮಾಡಿಯ ರಾಘವೇಂದ್ರ ಉಡುಪ, ವಾಣಿ ಉಡುಪ ದಂಪತಿ ಪುತ್ರಿ.