

ಹುಳುಕು ಆರಂಭಿಕ ಹಂತವನ್ನು ಮೀರಿ ಮುಂದುವರಿದರೆ, ಹುಳುಕಾದ ಹಲ್ಲಿನ ಭಾಗವನ್ನು ತೆಗೆದು ಅದಕ್ಕೆ ಸಿಮೆಂಟ್ ತುಂಬಿ ಹಲ್ಲಿನ ಆಕಾರ ಮತ್ತು ಕಾರ್ಯವನ್ನು ಪುನಃ ಸ್ಥಾಪಿಸಬಹುದು. ಅನೇಕ ಬಗೆಯ ಸಿಮೆಂಟ್ಗಳಿವೆ. ಮಗುವಿನ ವಯಸ್ಸು, ಯಾವ ಭಾಗದಲ್ಲಿ ಹಲ್ಲು ಹುಳುಕಾಗಿದೆ, ಎಷ್ಟು ಪ್ರಮಾಣದಲ್ಲಿ ಹುಳುಕಾಗಿದೆ ಎಂಬುದನ್ನು ಗಮನಿಸಿ ದಂತವೈದ್ಯರು ಸೂಕ್ತವಾದ ಸಿಮೆಂಟ್ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾವ ಸಂದರ್ಭದಲ್ಲಿ ಸಿಮೆಂಟ್ ತುಂಬುವುದರಿಂದ ಹಲ್ಲಿನ ಆಕಾರ, ರಚನೆ ಮತ್ತು ಕಾರ್ಯವನ್ನು ಪುನಃ ಸ್ಥಾಪಿಸಲು ಆಗುವುದಿಲ್ಲವೋ ಅಥವಾ ಹುಳುಕಿನಿಂದಾಗಿ ಹಲ್ಲಿನ ಹೆಚ್ಚಿನ ಭಾಗವನ್ನು ಕಳೆದುಕೊಂಡಾಗ ಕ್ಯಾಪ್ ಸೂಚಿಸುತ್ತಾರೆ. ಹುಳುಕಾದ ಹಲ್ಲಿನ ಭಾಗವನ್ನು ತೆಗೆದು ಹಲ್ಲನ್ನು ಸುತ್ತಲೂ ಸವೆಸಿ ಈ ಕ್ಯಾಪ್ ಗಳನ್ನು ಅಳವಡಿಸಬಹುದು. ಇದನ್ನೂ ಓದಿ:
ಹುಳುಕುಹಲ್ಲಿನಿಂದ ಮಕ್ಕಳಲ್ಲಿ ತೀವ್ರವಾದ ನೋವು, ಹಲ್ಲಿನ ಸುತ್ತ ಅಥವಾ ಮುಖದಲ್ಲಿ ಬಾವು ಕಂಡುಬಂದರೆ ದಂತವೈದ್ಯರನ್ನು ಕಾಣುವುದು ಅತಿ ಮುಖ್ಯ. ಇಂತಹ ಸಂದರ್ಭದಲ್ಲಿ ಹಾಲುಹಲ್ಲುಗಳಿಗೂ ರೂಟ್ ಕೆನಾಲ್ ಚಿಕಿತ್ಸೆ ಮಾಡಿ ಹಲ್ಲನ್ನು ಉಳಿಸಬಹುದು. ಹೀಗೆ ರೂಟ್ ಕೆನಾಲ್ ಚಿಕಿತ್ಸೆಯಾದ ನಂತರವೂ ಕ್ಯಾಪ್ ಹಾಕಿಸಬೇಕಾಗುತ್ತದೆ. ಕೆಲವು ಬಾರಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ತೆಗೆದುಕೊಳ್ಳದೆ, ಹಲ್ಲನ್ನು ಉಳಿಸಲು ಆಗದಿದ್ದಾಗ ಹಲ್ಲನ್ನು ತೆಗೆಯುವುದು ಸೂಕ್ತ. ಹೀಗೆ ಅವಧಿಗೂ ಮುನ್ನ ಹಾಲುಹಲ್ಲುಗಳನ್ನು ತೆಗೆದರೆ ಅಕ್ಕಪಕ್ಕದ ಹಲ್ಲುಗಳು ಆ ಜಾಗವನ್ನು ತುಂಬಿ ಶಾಶ್ವತ ಹಲ್ಲುಗಳು ಹುಟ್ಟಲು ಜಾಗ ಇಲ್ಲದಂತಾಗುತ್ತದೆ ಮತ್ತು ಇದರಿಂದ ವಕ್ರದಂತ ಸಮಸ್ಯೆ ಕೂಡ ಉಂಟಾಗುತ್ತದೆ. ಇದನ್ನು ತಪ್ಪಿಸಲು ಹಾಲುಹಲ್ಲನ್ನು ತೆಗೆಸಿದ ನಂತರ ಠಟಚ್ಚಛಿ ಞಚಜ್ಞಿಠಿಚಜ್ಞಿಛ್ಟಿಠ ಎನ್ನುವ ಪರಿಕರವನ್ನು ಸೂಚಿಸಿದಲ್ಲಿ ಅದನ್ನು ಹಾಕಿಸಿಕೊಳ್ಳುವುದು ಸೂಕ್ತ. ಮಂಗಳೂರು ಉದ್ಯಮಿ ಕೊಲೆ: ಭಯಾನಕ ಹತ್ಯೆಯ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ ನೋಡಿ
ಮನುಷ್ಯನ ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಕಾರಣವಾಗುವ ಶರೀರದ ಬಹು ಮುಖ್ಯ ಭಾಗಗಳಲ್ಲಿ ಹಲ್ಲು ಕೂಡ ಒಂದು. ಓದುಗರು ಹಲ್ಲುಗಳ ಕುರಿತ ಸಮಸ್ಯೆ, ಅದರ ತೀವ್ರತೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧೋಪಚಾರ ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಬಹುದು. ಆದ್ಯತೆಯ ಮೇರೆಗೆ ದಂತವೈದ್ಯರು ಸಲಹೆ, ಸೂಚನೆ ನೀಡಲಿದ್ದಾರೆ. ವಿಳಾಸ: ಸಂಪಾದಕರು, ಡೆಂಟಲ್ ಕೇರ್ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ. 24, ಸಾಯಿರಾಂ ಟವರ್ಸ್, ಮೊದಲನೇ ಮಹಡಿ, ಐದನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು - 560 018