ಮಂಗಳೂರು ಉದ್ಯಮಿ ಕೊಲೆ: ಭಯಾನಕ ಹತ್ಯೆಯ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ ನೋಡಿ

Mangalore 6 June 20
Published on

ಮಂಗಳೂರು: ಮುಲ್ಕಿಯಲ್ಲಿ ಹಾಡಹಗಲಲ್ಲೇ ಉದ್ಯಮಿ ಅಬ್ದುಲ್​ ಲತೀಫ್​ (38)ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಜನರೆದುರೇ ಸಾರ್ವಜನಿಕವಾಗಿಯೇ ಭಯಾನಕವಾಗಿ ಹತ್ಯೆ ಮಾಡಿದ್ದಾರೆ. ಈ ಭೀಕರ ಹತ್ಯೆಯ ಸಿಸಿಟಿವಿ ಕ್ಯಾಮರಾ ಫೂಟೇಜ್​ ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಉದ್ಯಮಿ ಅಬ್ದುಲ್​ ಲತೀಫ್​​​ರನ್ನು ಸಾರ್ವಜನಿಕವಾಗಿ ಕೊಚ್ಚಿ ಕೊಂದ ದುಷ್ಕರ್ಮಿಗಳು

ಕಾರು ಹಾಗೂ ಬೈಕ್​​ನಲ್ಲಿ ಬಂದ 9 ಮಂದಿ ದುಷ್ಕರ್ಮಿಗಳು ಲತೀಫ್​ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಂದಿದ್ದರು. ಪ್ರಾಣರಕ್ಷಣೆಗೆಂದು ಲತೀಫ್​ ಅವರು ಬ್ಯಾಂಕ್​ ಒಳಗೆ ಓಡಲು ಯತ್ನಿಸಿದ್ದರು. ಅಷ್ಟರಲ್ಲೇ ಆಗಮಿಸಿದ ದುಷ್ಕರ್ಮಿಗಳು, ಬ್ಯಾಂಕ್​ ಎದುರಲ್ಲೇ ಅವರಿಗೆ ಚೂರಿಯಿಂದ ಇರಿದಿದ್ದಾರೆ. ತೀವ್ರ ಗಾಯಗೊಂಡ ಲತೀಫ್​ ಅಲ್ಲೇ ಮೆಟ್ಟಿಲುಗಳಿಂದ ಉರುಳಿಬಿದ್ದಿದ್ದಾರೆ.

ಹಂತಕರಲ್ಲಿ ಮುಲ್ಕಿ ನಿವಾಸಿ ಮೊಹಮ್ಮದ್ ಹಾಸಿಮ್, ನಿಸಾರ್, ಮೊಹಮ್ಮದ್ ರಾಝಿಂ, ಉಡುಪಿಯ ಉಚ್ಚಿಲ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಎಂಬುವರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಮೂಡಬಿದ್ರೆಯಲ್ಲಿ ಉದ್ಯಮಿಯಾಗಿರುವ ಲತೀಫ್​ ಹತ್ಯೆಗೆ ವೈಯಕ್ತಿಕ ದ್ವೇಷವೇ ಕಾರಣ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net