
ವಿಜಯವಾಣಿ ಸುದ್ದಿಜಾಲ ಹೆಬ್ರಿ
ಹೆಬ್ರಿ ತಾಲೂಕು ಪಂಚಾಯಿತಿ, ಹೆಬ್ರಿ ಗ್ರಾಮ ಪಂಚಾಯಿತಿ ಹಾಗೂ ಸಾರ್ವಜನಿಕ ಗ್ರಂಥಾಲಯದ ವತಿಯಿಂದ 2 ದಿನಗಳ ಕಾಲ ನಡೆಯಲಿರುವ ಗ್ರಾಮಪಂಚಾಯಿತಿ ಅರಿವು ಕೇಂದ್ರದ ಸಲಹಾ ಸಮಿತಿ ಸದಸ್ಯರ ತರಬೇತಿ ಕಾರ್ಯಕ್ರಮ ಹೆಬ್ರಿ ಸಮಾಜಮಂದಿರದಲ್ಲಿ ಗುರುವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿ ವಿನಯಾ ರಾನಡೆ ಮಾಹಿತಿ ನೀಡಿ, ಗ್ರಂಥಾಲಯವು ಕೇವಲ ಮಾಹಿತಿ ಕೇಂದ್ರ ಮಾತ್ರವಾಗಿರದೆ, ಎಲ್ಲ ರೀತಿಯ ಸವಲತ್ತು, ಒಳಗೊಂಡಿರಬೇಕೆಂಬುದು ಸರ್ಕಾರದ ಆಶಯವಾಗಿದೆ. ಮಕ್ಕಳಿಗೆ, ಓದುಗರಿಗೆ ಸರ್ಕಾರ ವಿವಿಧ ಯೋಜನೆ ರೂಪಿಸಿದೆ. ಗ್ರಂಥಾಲಯದಲ್ಲಿ ಅಂಗವಿಕಲರಿಗೆ ಓದಲು ವ್ಯವಸ್ಥೆ, ಮಕ್ಕಳಿಗೆ ಬೇಸಿಗೆ ಶಿಬಿರದ ಮೂಲಕ ವಿವಿಧ ಚಟುವಟಿಕೆ, ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ತಾಲೂಕು ಯೋಜನಾಧಿಕಾರಿ ಮಹೇಶ್ ಕೆ.ಜಿ., ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸಮಿತಿಯ ಅಧ್ಯಕ್ಷ ತಾರಾನಾಥ ಬಂಗೇರ, ಪಿಡಿಒ ಸದಾಶಿವ ಸೇರ್ವೇಗಾರ್, ಸದಸ್ಯ ಜನಾರ್ದನ್, ಗ್ರಂಥಪಾಲಕಿ ಪುಷ್ಪಾವತಿ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಅನಿತಾ, ತಾಲೂಕಿನ ವಿವಿಧ ಪಂಚಾಯಿತಿಯ ಪ್ರತಿನಿಧಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.