ವಿಜಯವಾಣಿ ಸುದ್ದಿಜಾಲ ಸಿದ್ದಾಪುರ
ಸರ್ಕಾರಿ ಶಾಲೆಗಳು ಹಳೇ ವಿದ್ಯಾರ್ಥಿಗಳು, ವಿದ್ಯಾಭಿವಾನಿಗಳಿಂದ ಬೆಳೆಯುತ್ತಿದೆ. ಕಲಿಕಾ ಸಾವಾಗ್ರಿಗಳನ್ನು ಪಡೆದುಕೊಂಡ ಮಕ್ಕಳು ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು
ವಾರಾಹಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾವಿನಾಯಕ ಶಿಕ್ಷಣ ಪ್ರೋತ್ಸಾಹ ಸಮಿತಿ ಅಧ್ಯಕ್ಷ ಬಿ.ರತ್ನಾಕರ ಶೆಟ್ಟಿ ಮಧುರಬಾಳು ಹೇಳಿದರು.
ಉಳ್ಳೂರು74 ಗ್ರಾಮದ ವಾರಾಹಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ದಾನಿಗಳು ನೀಡಿದ ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಳ್ಳೂರು ಮಚ್ಚಟ್ಟು ವ್ಯವಸಾಯ ಸೇವಾ ಸಹಕಾರ ಸಂ ನಿರ್ದೇಶಕ ಶ್ರವಣೆ ಶೆಟ್ಟಿ ಸಂಪಿಗೇಡಿ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ವಿದ್ಯಾವಿನಾಯಕ ಶಿಕ್ಷಣ ಪ್ರೋತ್ಸಾಹ ಸಮಿತಿ ಕೋಶಾಧಿಕಾರಿ ರಾಜಕೃಷ್ಣ ಮಯ್ಯ ಕಾಸ್ಗದ್ದೆ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ರತ್ನಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದರು. ದಾನಿಗಳಾದ ಶ್ರವಣ್ ಶೆಟ್ಟಿ ಸಂಪಿಗೇಡಿ, ಸುಧೀರ್ ಪೂಜಾರಿ ಕೋಡಿ, ಸತೀಶ್ ಶೆಟ್ಟಿ ಆಲೂರು ಕಳಿ, ಕಿಶೋರ್ ಶೆಟ್ಟಿ ಜಡ್ಡಿನಮನೆ, ರಮೇಶ್ ಶೆಟ್ಟಿ ಹರ್ಕೆಬಾಳು ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು.
ವಿದ್ಯಾವಿನಾಯಕ ಶಿಕ್ಷಣ ಪ್ರೋತ್ಸಾಹ ಸಮಿತಿ ಕಾರ್ಯದರ್ಶಿ ಸುರೇಶ ಶೆಟ್ಟಿ ಕಾಸ್ಗದ್ದೆ, ಉಳ್ಳೂರು ಮಚ್ಚಟ್ಟು ವ್ಯವಸಾಯ ಸೇವಾ ಸಹಕಾರ ಸಂದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಭಾಕರ ಆಚಾರ್ಯ ಆಂಸಾಡಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಅಶ್ವಿನಿ ಕುಲಾಲ, ಅತಿಥಿ ಶಿಕ್ಷಕಿ ವಿನಯಾ, ಅಂಗನವಾಡಿ ಕೇಂದ್ರದ ಸಹಾಯಕಿ ದೀಪಾ ಸತೀಶ ಆಚಾರ್ಯ, ಎಸ್‌ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿಗಳು, ವಿದ್ಯಾವಿನಾಯಕ ಶಿಕ್ಷಣ ಪ್ರೋತ್ಸಾಹ ಸಮಿತಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಉಮೇಶ್ ಪೂಜಾರಿ ಸ್ವಾಗತಿಸಿದರು. ಸಹ ಶಿಕ್ಷಕ ಸಂತೋಷ ಕಾಂಚನ್ ನಿರೂಪಿಸಿ, ವಂದಿಸಿದರು.