ಪಾಶ್ಚಾತ್ಯ ದೇಶಗಳಲ್ಲಿ ಹಿಂದು ಧರ್ಮ ಪ್ರಸಾರ ಅನನ್ಯ ಕಾರ್ಯ

Edaneeru Shree 1
Published on

ಪುತ್ತಿಗೆ ಶ್ರೀಪಾದರ ಕಾರ್ಯಕ್ಕೆ ಎಡನೀರು ಶ್ರೀ ಶ್ಲಾಘನೆ

ಉಡುಪಿ ಶ್ರೀಕೃಷ್ಣ ಮಠ, ಗೀತಾ ಮಂದಿರಕ್ಕೆ ಭೇಟಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಾರತ ದೇಶದಲ್ಲಿ ಪಾಶ್ಚಾತ್ಯ ಸಂಸತಿಯ ಅಟ್ಟಹಾಸ ಕಂಡು ಬರುತ್ತಿರುವ ಸಂದರ್ಭದಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಕಡಲ ಒಡೆಯನಾದ ಶ್ರೀಕೃಷ್ಣನ ಮಂದಿರ ನಿರ್ಮಿಸುವ ಮೂಲಕ ಪುತ್ತಿಗೆ ಸುಗುಣೇಂದ್ರ ಶ್ರೀಗಳು ಹಿಂದು ಧರ್ಮ ಪ್ರಸಾರ ಮಾಡುತ್ತಿರುವುದು ಅನನ್ಯ ಕಾರ್ಯವಾಗಿದೆ ಎಂದು ಕಾಸರಗೋಡಿನ ಶಂಕರಾಚಾರ್ಯ ಸಂಸ್ಥಾನದ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶ್ಲಾಘಿಸಿದರು.

Edaneeru Shree 3
ಉಡುಪಿ ಮಠಕ್ಕೆ ಜೂನ್​ 15ರಂದು ಸಂಜೆ ಭೇಟಿ ನೀಡಿದ್ದ ಅವರು, ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ದರ್ಶನ ಪಡೆದರು. ಬಳಿಕ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀಗಳಿಂದ ಸತ್ಕಾರ ಸ್ವೀಕರಿಸಿ ಆಶೀರ್ವಚನ ನೀಡಿದರು.

ಗೀತಾ ಲೇಖನ ಯಜ್ಞ ಮಾದರಿ

Edaneeru Shree 2
ಸುಗುಣೇಂದ್ರ ಶ್ರೀಪಾದರು ತಮ್ಮ ಚತುರ್ಥ ಪರ್ಯಾಯ ಹಾಗೂ ಸನ್ಯಾಸ ಸ್ವೀಕಾರದ 50ನೇ ವರ್ಷದ ಸಂದರ್ಭದಲ್ಲಿ ಕೋಟಿ ಜನರಿಂದ ಭಗವದ್ಗೀತೆ ಬರೆಸುವ ಮಹಾನ್​ ಸಂಕಲ್ಪ ಕೈಗೊಂಡಿದ್ದಾರೆ. ಕೋಟಿ ಗೀತಾ ಲೇಖನ ಯಜ್ಞದಲ್ಲಿ ಈಗಾಗಲೇ ಲಕ್ಷಾಂತರ ಜನರು ಗೀತೆಯನ್ನು ಬರೆದು ಜನ್ಮ ಸಾರ್ಥಕ ಮಾಡಿಕೊಂಡಿದ್ದಾರೆ. ಅರ್ಜುನನ್ನು ನೆಪವಾಗಿಸಿಕೊಂಡು ಗೀತಾಚಾರ್ಯನಿಂದ ಹೇಳಲ್ಪಟ್ಟ ಭಗವದ್ಗೀತೆಯನ್ನು ಎಲ್ಲ ಸನಾತನಿಗಳು ಓದಬೇಕು ಹಾಗೂ ಇಂತಹ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆಯಿತ್ತರು.

ಕಿರಿಯ ಶಿಷ್ಯ ಸುಶ್ರೀಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ರಮೇಶ ಭಟ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net