ನವದೆಹಲಿ: ಡೈರೆಕ್ಟ್ -ಟು-ಹೋಮ್ (ಡಿಟಿಎಚ್) ಸೇವೆಗಳನ್ನು ನಿಯಮಗಳ ಚೌಕಟ್ಟಿಗೆ ತರುವ ಉದ್ದೇಶದ ಕನ್ಸಲ್ಟೇಶನ್ ಪೇಪರ್ ಅನ್ನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಪ್ರಕಟಿಸಿದೆ. ಈ ಸಮಾಲೋಚನಾ ಪೇಪರ್ ಓದಿಕೊಂಡು ಅಭಿಪ್ರಾಯ, ಸಲಹೆಗಳನ್ನ ನೀಡುವಂತೆ ಅದು ಸೋಮವಾರ ಪಾಲುದಾರರನ್ನು ಕೇಳಿಕೊಂಡಿದೆ.
ಕ್ಷೇತ್ರ ಪಾಲುದಾರರು ಇದಕ್ಕೆ ಸಂಬಂಧಿಸಿದ ಲಿಖಿತ ಪ್ರತಿಕ್ರಿಯೆಯನ್ನು ಡಿಸೆಂಬರ್ 14ರೊಳಗೆ ಮತ್ತು ಮರು ಪ್ರತಿಕ್ರಿಯೆಯನ್ನು ಡಿಸೆಂಬರ್ 19ರೊಳಗೆ ಸಲ್ಲಿಸಬೇಕು. ಪ್ರತಿಕ್ರಿಯೆ, ಮರು ಪ್ರತಿಕ್ರಿಯೆಗಳನ್ನು ಇ-ಮೇಲ್ ಮುಖಾಂತರ ಕಳುಹಿಸಿದರೆ ಒಳಿತು ಎಂದು ಟ್ರಾಯ್ ಸ್ಪಷ್ಟವಾಗಿ ಹೇಳಿದೆ.
ಇದನ್ನೂ ಓದಿ: ಹನಿಮೂನ್ ಪ್ರವಾಸಕ್ಕೆ 1 ರೂಪಾಯಿ ಖರ್ಚು ಮಾಡಿಲ್ವಂತೆ ಕಾಜಲ್ ದಂಪತಿ: ಐಷಾರಾಮಿ ಸೌಲಭ್ಯ ಫ್ರೀ ಸಿಕ್ಕಿದ್ಹೇಗೆ?
ಟ್ರಾಯ್ ಇದಕ್ಕೂ ಮೊದಲು ಡಿಟಿಎಚ್ ಮತ್ತು ಮಲ್ಟಿ-ಸಿಸ್ಟಮ್ ಆಪರೇಟರ್ಸ್ (ಎಂಎಸ್ಒ) ಕುರಿತ ರೆಗ್ಯುಲೇಟರಿ ಫ್ರೇಮ್ವರ್ಕ್ ಫಾರ್ ಪ್ಲಾಟ್ಫಾರಂ ಸರ್ವೀಸಸ್ ಅನ್ನು ಪ್ರಕಟಿಸಿತ್ತು. ಕೇಬಲ್ ಟಿವಿ ಮತ್ತು ಅದರ ಚಂದಾದಾರರಿಗೆ ಸೇವೆ ಒದಗಿಸುವ ಅಧಿಕೃತ ಸೇವಾ ಪೂರೈಕೆದಾರರನ್ನು ಎಂಎಸ್ಒ ಎನ್ನುತ್ತಾರೆ. ನಿಯಮ ರೂಪಿಸುವ ಸಂದರ್ಭದಲ್ಲಿ ಡಿಟಿಎಚ್ ಇರುವಲ್ಲಿ ಅಗತ್ಯವಿರುವ ಕಡೆಗೆ ಎಂಎಸ್ಒ ಎಂದೂ ಸೇರಿಸಬೇಕು ಎಂದು ಸಚಿವಾಲಯವೂ ಸಲಹೆ ನೀಡಿದೆ. ಎಲ್ಲ ಸಮಾಲೋಚನಾ ಪ್ರಕ್ರಿಯೆಗಳು ಮುಗಿದ ಬಳಿಕ ಟ್ರಾಯ್ ತನ್ನ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..