ಒನ್ ಟೇಕ್ ಸಿನಿಮಾ; ಹೊಸ ದಾಖಲೆ ಬರೆದ ರಕ್ತಗುಲಾಬಿ...

One take
Published on

ಬೆಂಗಳೂರು: ಈಗಾಗಲೇ ಕನ್ನಡದಲ್ಲಿ ‘ದಕ್ಷ’ ಮತ್ತು ‘ಬಿಂಬ’ ಎಂಬ ಒನ್​ಟೇಕ್ ಸಿನಿಮಾಗಳು ಬಂದಿವೆ. ಅಂದರೆ, ಒಂದೇ ಆಕ್ಷನ್ ಮತ್ತು ಕಟ್​ನಲ್ಲಿ ಸಂಪೂರ್ಣವಾಗಿ ಸೆರೆಹಿಡಿಯಲಾದ ಚಿತ್ರಗಳವು. ಆದರೆ, ಅವೆರಡೂ ಚಿತ್ರಗಳು ಸೀಮಿತ ಪ್ರದೇಶದಲ್ಲಿ ನಿರ್ವಣವಾದಂತಹ ಚಿತ್ರಗಳಾಗಿದ್ದವು. ಈಗ ರಾಜೇಶ್ ಬಿ ಅಲಿಯಾಸ್ ರಾಬಿ ಎನ್ನುವವರು ‘ರಕ್ತಗುಲಾಬಿ’ ಎಂಬ ಇನ್ನೊಂದು ಒನ್ ಟೇಕ್ ಸಿನಿಮಾ ಮಾಡಿದ್ದು, ಇದರಲ್ಲಿ ಬ್ಯಾಂಕ್ ರಾಬರಿ, ಚೇಸಿಂಗ್, ಬಾಂಬ್​ಬ್ಲಾಸ್ಟ್ ಎಲ್ಲವೂ ಇರಲಿದೆಯಂತೆ.

‘ರಕ್ತಗುಲಾಬಿ ಎರಡು ಗಂಟೆ ಎಂಟು ನಿಮಿಷಗಳಲ್ಲಿ ತಯಾರಾದ ಚಿತ್ರ. ‘ರಕ್ತಗುಲಾಬಿ’ ಚಿತ್ರದಲ್ಲಿ ವಿಕ್ರಮಾದಿತ್ಯ ಮತ್ತು ಶಿವಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಜೋತ್ ಸಂಗೀತ ಸಂಯೋಜಿಸಿದರೆ, ರಾವಣನ್ ಎನ್ನುವವರು ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರವನ್ನು ಬ್ಲಾಕ್​ಬೆರ್ರಿ 4ಕೆ ಮೊಬೈಲ್​ನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರವು ಸದ್ಯ ಸೆನ್ಸಾರ್ ಅಂಗಳದಲ್ಲಿದ್ದು, ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net