More

    3ನೇ ಬಾರಿ ಟ್ರಾಫಿಕ್​ ನಿಯಮ ಉಲ್ಲಂಘನೆ ದಂಡಕ್ಕೆ ಡಿಸ್ಕೌಂಟ್​; ಎರಡು ದಿನದಲ್ಲಿ 50.71 ಲಕ್ಷ ದಂಡ ಸಂಗ್ರಹ

    ವಿಜಯವಾಣಿ ಸುದ್ದಿಜಾಲ, ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ.50 ಡಿಸ್ಕೌಂಟ್ ನೀಡಿದ 2ನೇ ದಿನ 22.36 ಲಕ್ಷ ರೂ. ದಂಡ ಸಂಗ್ರಹವಾಗಿದೆ. ಎರಡು ದಿನಗಳಲ್ಲಿ ಒಟ್ಟು 50.71 ಲಕ್ಷ ರೂ. ಸಂಗ್ರಹವಾಗಿದೆ.

    ಫೆ.11ರ ಒಳಗೆ ಸಂಚಾರ ಪೊಲೀಸರು ದಾಖಲಿಸಿರುವ ಇ-ಚಲನ್ ದಂಡ ಪಾವತಿಗೆ 3ನೇ ಬಾರಿ ಶೇ.50 ರಿಯಾಯಿತಿ ನೀಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು.

    ಈ ಸೌಲಭ್ಯ ಬಳಕೆ ಮಾಡಿಕೊಂಡಿರುವ ವಾಹನ ಸವಾರ, ಚಾಲಕರು ಶುಕ್ರವಾರ 7,160 ಪ್ರಕರಣಗಳಲ್ಲಿ 22,36,350 ರೂ. ದಂಡ ಪಾವತಿ ಮಾಡಿದ್ದಾರೆ. ಇದೀಗ ಒಟ್ಟಾರೆ ಎರಡು ದಿನಗಳಲ್ಲಿ 15,980 ಪ್ರಕರಣಗಳಿಂದ 50,71,850 ರೂ. ದಂಡ ಸಂಗ್ರಹವಾಗಿದೆ. ಸೆಪ್ಟೆಂಬರ್ 9ರ ವರೆಗೂ ಈ ಸೌಲಭ್ಯವಿದೆ. ಸಾರ್ವಜನಿಕರು ಬಳಸಿಕೊಳ್ಳಬೇಕೆಂದು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts