More

    ಟ್ರಾಫಿಕ್‌ ಸಂಬಂಧಿತ ವಾಯುಮಾಲಿನ್ಯವು ಮೆದುಳಿನ ಕಾರ್ಯವನ್ನು ದುರ್ಬಲಗೊಳಿಸುತ್ತದೆ: ಅಧ್ಯಯನ

    ನವದೆಹಲಿ: ಟ್ರಾಫಿಕ್‌ನಿಂದ ಉಂಟಾಗುವ ವಾಯುಮಾಲಿನ್ಯವು ಮೆದುಳಿನ ಕಾರ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ. ಈ ಅಧ್ಯಯನದಲ್ಲಿ ವಾಯುಮಾಲಿನ್ಯ ನಿಮ್ಮ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಹೇಳಲಾಗಿದೆ.

    ಇರ್ವಿನ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನದ ಪ್ರಕಾರ, ಸಂಚಾರ-ಸಂಬಂಧಿತ ವಾಯು ಮಾಲಿನ್ಯವು ನೆನಪಿನ ಶಕ್ತಿಯನ್ನು ಕ್ಷಿಣಿಸುತ್ತದೆ. ವಾಯುಮಾಲಿನ್ಯದಿಂದ ಜ್ಞಾಪಕ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ ಎಂದು ಈ ಸಂಶೋಧನೆಯಲ್ಲಿ ತಿಳಿಸಲಾಗಿದೆ.

    ವಾಯು ಮಾಲಿನ್ಯದಿಂದ ಮರೆಗುಳಿತನ ಕಾಯಿಲೆ ಬರುತ್ತದೆ. ಏಕೆಂದರೆ ನಮ್ಮನ್ನು ಸುತ್ತುವರಿದ ಗಾಳಿಯಲ್ಲಿ ವಿಷಕಾರಿ ಕಣಗಳು ಹರಡುವಿಕೆಯು ಜಾಗತಿಕವಾಗಿ ಹೆಚ್ಚುತ್ತಿದೆ. ಮರೆಗುಳಿತನ ಕಾಯಿಲೆಯು ವಯಸ್ಸಾದವರಲ್ಲಿ ಸಾಮಾನ್ಯವಾಗಿದೆ. ಆದರೆ ಇಂದಿನ ದಿನಗಳಲ್ಲಿ ಮರೆಗುಳಿತನ ಎಲ್ಲಾ ವಯಸ್ಕರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಆದರೆ ಈ ಖಾಯಿಲೆಗೆ ನಿಖರವಾದ ಮೂಲವು ಅಸ್ಪಷ್ಟವಾಗಿಯೇ ಉಳಿದಿತ್ತು. ಆನುವಂಶಿಕ ಪ್ರವೃತ್ತಿಗಳು ಈ ರೋಗದ ಪ್ರಗತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪರಿಸರದ ವಿಷಕಾರಿಗಳು, ವಾಯುಮಾಲಿನ್ಯವು ಮರೆಗುಳಿತನ ಕಾಯಿಲೆಯ ಆಕ್ರಮಣಕ್ಕೆ ಕಾರಣವಾಗಬಹುದು ಎಂದು ಈ ಸಂಶೋಧನೆಯಿಂದ ತಿಳಿದು ಬಂದಿದೆ.

    ಇದನ್ನೂ ಓದಿ: ಮೊದಲ ಬಾರಿಗೆ ಮಗಳ ಮುಖ ತೋರಿಸಿದ ಧ್ರುವ ಸರ್ಜಾ

    ಸಂಶೋಧಕರ ತಂಡವು ಮೂರು ಮತ್ತು 9 ತಿಂಗಳ ಇಲಿಗಳನ್ನು ಬಳಸಿಕೊಂಡು 12 ವಾರಗಳವರೆಗೆ ಒಳ್ಳೆಯ ಗಾಳಿ ಮತ್ತು ಕೆಟ್ಟಗಾಳಿಯಲ್ಲಿಟ್ಟು ಪರೀಕ್ಷೆ ಮಾಡಲಾಯಿತ್ತು. ಸಂಶೋಧಕರು ಮೆದುಳಿನ ಕಾರ್ಯಗಳು ಮತ್ತು ಮರೆವು ಕಾರ್ಯಕ್ಕೆ ಸಂಬಂಧಿಸಿದ ಪರೀಕ್ಷೆಯನ್ನು ನಡೆಸಿದ್ದಾರೆ. ಈ ವಿಷಗಾಳಿಯಿಂದ ಮೆದುಳಿನ ನರಗಳು ದೌರ್ಬಲ್ಯಗೊಳ್ಳುತ್ತಿರುವುದನ್ನು ಕಂಡುಕೊಂಡರು. ನರಗಳು ದೌರ್ಬಲ್ಯವಾಗುತ್ತಾ ಹೋದಂತೆ ನಮ್ಮ ಮರೆವು ಹೆಚ್ಚಾಗುತ್ತದೆ.

    ವಾಯುಮಾಲಿನ್ಯವು ಮರೆಗುಳಿತನ ಕಾಯಿಲೆಗೆ ಕಾರಣವಾದ ಪರಿಸರ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ. ಗಂಭೀರವಾದ ಈ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಈ ಸಾಕ್ಷ್ಯವು ಆತಂಕಕಾರಿಯಾಗಿದೆ. ಪರಿಣಾಮಕಾರಿಯಾದ ನಿಯಮಾವಳಿಗಳನ್ನು ಅಳವಡಿಸಿಕೊಳ್ಳಲು ನಾವು ಕ್ರಮ ಕೈಗೊಳ್ಳಬೇಕು. ಜೀವನಶೈಲಿಯ ಬದಲಾವಣೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ನಮ್ಮ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಒಟ್ಟಾಗಿ ಕೆಲಸ ಮಾಡುವುದು ಕಡ್ಡಾಯವಾಗಿದೆ.

    ಟ್ರಾಫಿಕ್ ಕಿರಿಕಿರಿ, ಹೆಲ್ಮೆಟ್ ಇಲ್ಲದೆ ಅಪರಿಚಿತ ವ್ಯಕ್ತಿಯ ಬೈಕ್​​ನಲ್ಲಿ ಪ್ರಯಾಣಿಸಿದ ಅಮಿತಾಭ್ ಬಚ್ಚನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts