

ಮುಂಬೈ: ಬಾಲಿವುಡ್ 'ಬಿಗ್ ಬಿ' ಅಮಿತಾಭ್ ಬಚ್ಚನ್ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ. ಇವರು ಸರಳತೆಗೆ ಹೆಸರುವಾಸಿಯಾಗಿದ್ದಾರೆ. ಇವರ ಸರಳ ವ್ಯಕ್ತಿತ್ವಕ್ಕೆ ಇತ್ತೀಚೆಗೆ ನಡೆದ ಒಂದು ಘಟನೆ ಸಾಕ್ಷಿಯಾಗಿದೆ. ಅಮಿತಾಭ್ ಬಚ್ಚನ್ ಅವರು ಟ್ರಾಫಿಕ್ ಕಿರಿಕಿರಿಯಿಂದ ಅಪರಿಚಿತರ ಬೈಕ್‌ನಲ್ಲಿ ಲಿಫ್ಟ್ ತೆಗೆದುಕೊಂಡು ಸುದ್ದಿಯಾಗಿದ್ದಾರೆ.
ಶೂಟಿಂಗ್‌ಗೆ ಕಾರಿನಲ್ಲಿ ಹೋಗುವಾಗ ಅಮಿತಾಭ್ ಬಚ್ಚನ್ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾರೆ ಅಮಿತಾಭ್. ಆಗ ಅವರು ತಕ್ಷಣವೇ ಅಪರಿಚಿತರೊಬ್ಬರ ಬೈಕ್ ಏರಿ ಶೂಟಿಂಗ್ ಸ್ಥಳವನ್ನು ತಲುಪಿದ್ದಾರೆ. ಈ ಬಗ್ಗೆ ಬಚ್ಚನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿಗೆ ಮಗಳ ಮುಖ ತೋರಿಸಿದ ಧ್ರುವ ಸರ್ಜಾ
'ಧನ್ಯವಾದಗಳು ಸ್ನೇಹಿತ. ನಿಮಗೆ ಗೊತ್ತಿಲ್ಲ, ಆದರೆ ನೀವು ನನ್ನನ್ನು ಕೆಲಸ ಮಾಡುವ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಕರೆದೊಯ್ದಿದ್ದೀರಿ. ವೇಗವಾಗಿ ಮತ್ತು ಟ್ರಾಫಿಕ್ ಜಾಮ್‌ಗಳನ್ನು ತಪ್ಪಿಸಿ, ನನ್ನನ್ನು ಕರೆದೊಯ್ದಿದ್ದೀರಿ. ಶಾರ್ಟ್ಸ್ ಮತ್ತು ಹಳದಿ ಬಣ್ಣದ ಟಿ-ಶರ್ಟ್ ಮಾಲೀಕರಿಗೆ ಧನ್ಯವಾದಗಳು' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡು ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದಾರೆ.
ಟ್ರಾಫಿಕ್‌ನಲ್ಲಿ ಸಿಲುಕಿದ್ದ ಬಚ್ಚನ್, ಅಪರಿಚಿತ ವ್ಯಕ್ತಿಯೊಬ್ಬರ ಜತೆಗೆ ಬೈಕ್‌ನಲ್ಲಿ ಸವಾರಿ ಮಾಡಿರುವ ಬಗ್ಗೆ ಒಂದಷ್ಟು ನೆಗೆಟಿವ್ ಹಾಗೂ ಪಾಸಿಟಿವ್ ಕಾಮೆಂಟ್‌ಗಳು ಕೂಡ ಕೇಳಿಬಂದಿವೆ. ಅಮಿತಾಭ್ ಬಚ್ಚನ್ ಅವರು ಬೈಕ್‌ನಲ್ಲಿ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸಿಲ್ಲ. ಆ ಬೈಕ್ ಸವಾರ ಕೂಡ ಒಂದು ಟೋಫಿಯನ್ನು ಧರಿಸಿರುವುದು ಬಿಟ್ಟರೆ, ಅವರು ಕೂಡ ಹೆಲ್ಮೆಟ್ ಧರಿಸಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವು ಅಮಿತಾಭ್ ಅವರ ಸರಳತೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.