More

  ಸೌತಡ್ಕ ದ್ವಾರದ ಮುಂಭಾಗ ಟ್ರಾಫಿಕ್ ಪೊಲೀಸ್: ವಾರಾಂತ್ಯ ಸರಣಿ ರಜೆ ಸಂದರ್ಭ ಸಂಚಾರ ಸುಗಮ

  ವಿಜಯವಾಣಿ ಸುದ್ದಿಜಾಲ ಕೊಕ್ಕಡ

  ಧರ್ಮಸ್ಥಳ-ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯಲ್ಲಿರುವ ಸೌತಡ್ಕ ದ್ವಾರದಲ್ಲಿ ಕಂಡುಬರುತ್ತಿದ್ದ ಟ್ರಾಫಿಕ್ ಜಾಮ್ ನಿಯಂತ್ರಿಸಲು ಬೆಳ್ತಂಗಡಿ ಸಂಚಾರ ಠಾಣಾ ಸಿಬ್ಬಂದಿ ಸೋಮವಾರ ಸೌತಡ್ಕ ದ್ವಾರದ ಬಳಿಯೇ ನಿಂತು ಕರ್ತವ್ಯ ನಿರ್ವಹಿಸಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿದರು.

  ದೇವಳದ ಮುಂಭಾಗದಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ದೇವಳದ ವತಿಯಿಂದ ಇಬ್ಬರು ಸಿಬ್ಬಂದಿ ಕರ್ತವ್ಯದಲ್ಲಿದ್ದು ಟ್ರಾಫಿಕ್ ಜಾಮ್ ತಪ್ಪಿಸಲು ಸಹಕರಿಸಿದರು. ಸರಣಿ ರಜೆ ಹಿನ್ನೆಲೆ, ಧರ್ಮಸ್ಥಳ, ಸುಬ್ರಹ್ಮಣ್ಯ, ಸೌತಡ್ಕ ಆಗಮಿಸುವ ಭಕ್ತಾದಿಗಳ ವಾಹನಗಳಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

  ಮೇ 28ರ ವಿಜಯವಾಣಿಯಲ್ಲಿ ಸೌತಡ್ಕದಲ್ಲಿ ಪಾರ್ಕಿಂಗ್ ಕಿರಿಕಿರಿ ಎಂಬ ಶೀರ್ಷಿಕೆ ಅಡಿ ವರದಿ ಪ್ರಕಟಿಸಲಾಗಿತ್ತು. ವರದಿ ಬಳಿಕ ಎಚ್ಚೆತ್ತುಕೊಂಡ ಎರಡು ಇಲಾಖೆಗಳು ಸಮಸ್ಯೆ ಬಗೆಹರಿಸಲು ಮುಂದಾಗಿವೆ. ಮುಂದಿನ ದಿನಗಳಲ್ಲಿ ವಾರಾಂತ್ಯದಲ್ಲಿ ಹಾಗೂ ಸರಣಿ ರಜೆಗಳಲ್ಲಿ ಸಂಚಾರ ಠಾಣಾ ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಹಿಂದೆ ಸಂಚಾರ ದಟ್ಟಣೆ ಸಮಯದಲ್ಲಿ ಕೊಕ್ಕಡ ಆಟೋ ಚಾಲಕ ಮಾಲೀಕ ಸಂಘದವರು, ಸ್ಥಳೀಯ ಜೀಪು ಚಾಲಕರು ಸಂಚಾರ ಸುಗಮಗೊಳಿಸಲು ಹರಸಾಹಸ ಪಡುತ್ತಿದ್ದರು. ಪತ್ರಿಕೆಯ ಕಳಕಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.

  ಧರ್ಮಸ್ಥಳ ಸುಬ್ರಹ್ಮಣ್ಯ ರಸ್ತೆಯ ಕೊಕ್ಕಡ ಸಮೀಪದ ಸೌತಡ್ಕ ದ್ವಾರದ ಬಳಿ ವಾರಾಂತ್ಯದಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಬಗ್ಗೆ ವಿಜಯವಾಣಿ ಪತ್ರಿಕೆಯಿಂದ ತಿಳಿಯಿತು. ಸಮಸ್ಯೆಗೆ ಸ್ಪಂದಿಸಿ ನಮ್ಮ ಸಿಬ್ಬಂದಿಯೊಬ್ಬರನ್ನು ಸಂಚಾರ ಸುಗಮಗೊಳಿಸಲು ನಿಯೋಜಿಸಿದ್ದೇವೆ. ಮುಂದಿನ ದಿನಗಳಲ್ಲಿ ವಾರಾಂತ್ಯ ಹಾಗೂ ಸರಣಿ ರಜೆಗಳ ಸಂದರ್ಭ ನಮ್ಮ ಸಿಬ್ಬಂದಿ ಸ್ಥಳದಲ್ಲಿದ್ದು ಸಂಚಾರ ಸುಗಮಗೊಳಿಸುತ್ತಾರೆ.
  ಅರ್ಜುನ್ ಎಚ್.ಕೆ.
  ಎಸ್‌ಐ, ಸಂಚಾರ ಠಾಣೆ ಬೆಳ್ತಂಗಡಿ

  See also  ಗಡಿನಾಡ ಕನ್ನಡ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಸಮಾರೋಪ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts