

ಬೆಳ್ತಂಗಡಿ: ಉಜಿರೆಯ ಎಸ್ಡಿಎಂ ಡಿ.ಎಡ್ ಕಾಲೇಜಿನ ಸಭಾಂಗಣದಲ್ಲಿ ಎಸ್.ಡಿ.ಎಂ ಶಾಲಾ ವಿದ್ಯಾರ್ಥಿಗಳಿಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಸ್ತು ಸಂಗ್ರಹಾಲಯದ ‘ಮ್ಯೂಸಿಯಂ ಆನ್ ವೀಲ್’ ಜತೆಗೆ ‘ಒರಿಗಾಮಿ’ ಕಾರ್ಯಾಗಾರ ನಡೆಯಿತು.
ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್.ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು.
‘ಮ್ಯೂಸಿಯಂ ಆನ್ ವೀಲ್’ನ ಸಹಾಯಕ ಶಿಕ್ಷಣ ಸಹಾಯಕರಾದ ಋತುಜ ಹಾಗೂ ಕಶ್ಯಪಿ ಕಾರ್ಯಗಾರದ ಕುರಿತು ಮಾಹಿತಿ ಹಂಚಿಕೊಂಡರು. ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಬಣದ್ಣ ಕಾಗದಗಳಿಂದ ಒರಿಗಾಮಿ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.
ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್, ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲಾ ಮುಖ್ಯಶಿಕ್ಷಕ ಮನ್ಮೋಹನ್ ನಾಯ್ಕ ಕೆ.ಜಿ, ಮ್ಯೂಸಿಯಂ ಆನ್ ವೀಲ್ನ ಶಿಕ್ಷಣ ಸಹಾಯಕರಾದ ಚಿನ್ಮಯಿ, ಚಟುವಟಿಕೆ ಸಹಾಯಕರಾದ ದೇವೇಶ್ ಮತ್ತು ಅಮಿತ್, ಮ್ಯೂಸಿಯಂ ಬಸ್ ಚಾಲಕ ಶಿವಾಜಿ ತಾವರೆ ಉಪಸ್ಥಿತರಿದ್ದರು.
ಶಿಕ್ಷಕಿ ಕಲ್ಯಾಣಿ ನಿರೂಪಿಸಿದರು. ಮುಖ್ಯಶಿಕ್ಷಕ ಮನ್ಮೋಹನ್ ನಾಯ್ಕ ಕೆ.ಜಿ ಸ್ವಾಗತಿಸಿದರು. ಶಿಕ್ಷಕ ಜಾರ್ಜ್ ವಂದಿಸಿದರು.