

ಅಹಮದಾಬಾದ್: ಅಹಮದಬಾದ್ ನಗರದಲ್ಲಿ ಕಳೆದ ಕೆಲವು ಘಂಟೆಗಳಿಂದ ಎಡ ಬಿಡದೆ ಮಳೆ ಸುರಿಯುತ್ತಿರುವ ಕಾರಣ ಚೆನ್ನೈ ಸೂಫರ್ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯದ ಟಾಸ್ ವಿಳಂಬವಾಗಿದೆ.
ಕಳೆದ ಕೆಲವು ನಿಮಿಷಗಳಿಂದ ಗುಡುಗು ಸಹಿತ ಮಳೆಯಾಗುತ್ತಿದ್ದು ಒಂದು ವೇಳೆ ಪಂದ್ಯ ಭಾನುವಾರ ಸ್ಥಗಿತವಾದರೆ ಬದಲಿ ದಿನ ಸೋಮವಾರದಂದು ಫಿನಾಲೆ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.
ಚೆನ್ನೈ ಸೂಪರ್ಕಿಂಗ್ಸ್ ಹಾಗು ಗುಜರಾತ್ ಟೈಟಾನ್ಸ್ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯವು ಕೂಡ ಮಳೆಯಿಂದಾಗಿ ತಡವಾಗಿ ಶುರುವಾಗಿತ್ತು.
ಒಂದು ಲಕ್ಷದ ಮೂವತ್ತು ಸಾವಿರ ಆಸನ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪ್ರೇಮಿಗಳು ಫೈನಲ್ ಪಂದ್ಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.