IPL ಫಿನಾಲೆಗೂ ಮುನ್ನ ನಿವೃತ್ತಿ ಘೋಷಿಸಿದ CSK ತಂಡದ ಸ್ಟಾರ್​ ಆಟಗಾರ

Ambati Rayudu
Published on

ಚೆನ್ನೈ:  ಹಾಲಿ ಐಪಿಎಲ್​ ಋತು ಅನೇಕ ಕಾರಣಗಳಿಗೆ ಹೆಚ್ಚು ಸದ್ದು ಮಾಡುತ್ತಿದ್ದು ಈ ಮಧ್ಯೆ ಚೆನ್ನೈ ತಂಡದ ಆಟಗಾರರೊಬ್ಬರು ಫೈನಲ್​ ಪಂದ್ಯಕ್ಕೂ ಮುನ್ನ ನಿವೃತ್ತಿ ಘೋಷಿಸಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಸ್ಟಾರ್​ ಆಟಗಾರ ಅಂಬಟಿ ರಾಯುಡು ಫೈನಲ್​ ಪಂದ್ಯ ಶುರುವಾಗುವುದಕ್ಕೂ ಮುನ್ನ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ.

ಆನಂದಿಸಿದ್ದೇನೆ

ಈ ಕುರಿತು ಟ್ವೀಟ್​ ಮಾಡಿರುವ ರಾಯುಡು ಎರಡು ಶ್ರೇಷ್ಠ ತಂಡಗಳಾದ ಮುಂಬೈ ಹಾಗು ಚೆನ್ನೈ ಪರ 14 ಆವೃತ್ತಿಗಳಲ್ಲಿ 204 ಪಂದ್ಯಗಳು, 11 ಪ್ಲೇಆಫ್, 8 ಫಿನಾಲೆ, 5 ಟ್ರೋಫಿ ಆಶಾದಾಯಕವಾಗಿ ಇಂದು ಸಂಜೆ 6ನೇಯದ್ದು.

ನಾನು ನಿರ್ಧರಿಸಿದ್ದೇನೆ ಇಂದು ನಡೆಯುವ ಫೈನಲ್​ ನನ್ನ ಕೊನೆಯ ಪಂದ್ಯವಾಗಿರಲಿದೆ. ನಾನು ನಿಜವಾಗಲೂ ಈ ಐಪಿಎಲ್​ನಲ್ಲಿ ಆಡುವುದನ್ನು ಆನಂದಿಸಿದ್ದೇನೆ ಈ ಭಾರಿ ಯಾವುದೇ ಯೂ ಟರ್ನ್​ ಇಲ್ಲ ಎಂದು ಕ್ರಿಕೆಟಿಗ ಅಂಬಟಿ ರಾಯುಡು ಟ್ವೀಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net