More

    ತರಗತಿಯಲ್ಲಿ ವಿದ್ಯಾರ್ಥಿನಿಯರಿಗೆ ನಮಾಜ್​ ಮಾಡುವುದನ್ನು ಹೇಳಿಕೊಡುತ್ತಿರುವ ಶಿಕ್ಷಕಿ; ವಿಡಿಯೋ ವೈರಲ್​

    ಲಖನೌ: ಕಾಲೇಜಿನಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯರಿಗೆ ನಮಾಜ್​ ಮಾಡುವುದನ್ನು ಹೇಳಿಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಘಟನೆಯೂ ಉತ್ತರಪ್ರದೇಶದ ಭಾಗ್​ಪತ್​ ಜಿಲ್ಲೆಯಲ್ಲಿ ನಡೆದಿದ್ದು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.

    ವಿಡಿಯೋ ವೈರಲ್​

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಇದರಲ್ಲಿ ಶಿಕ್ಷಕಿ ಕುಳಿತುಕೊಂಡು ವಿದ್ಯಾರ್ಥಿನಿಯರಿಗೆ ಸೂಚನೆ ನೀಡಬಹುದನ್ನು ಕಾಣಬಹುದಾಗಿದೆ. ಈ ಕುರಿತು ಭಾಗ್​ಪತ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಕುಡಿಬೇಡ ಎಂದಿದ್ದಕ್ಕೆ ಟಾಯ್ಲೆಟ್​ ಕ್ಲೀನರ್​​ ಸೇವಿಸಿ ಪ್ರಾಣ ಬಿಟ್ಟ!

    ಘಟನೆಯೂ ಹೋಶಿಯಾರಿ ದೇವಿ ಗರ್ಲ್ಸ್ ಇಂಟರ್ ಕಾಲೇಜಿನಲ್ಲಿ ನಡೆದಿದ್ದು ಇದರ ವಿಡಿಯೋವನ್ನು ಮೊದಲು ಹಿಂದೂ ಸಂಘಟನೆಯ ಮುಖಡಂರೊಬ್ಬರು ವಾಟ್ಸ್​​ಆ್ಯಪ್​ನಲ್ಲಿ ಹರಿಬಿಟ್ಟಿದ್ದಾರೆ. ಇದಾದ ಕೆಲವೇ ಕ್ಷಣಗಳ ಬಳಿಕ ಸುದ್ದಿ ವೈರಲ್​ ಆಗಿದ್ದು ನೆಟ್ಟಿಗರು ಶಿಕ್ಷಕಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

    ತನಿಖೆಗೆ ಆಗ್ರಹ

    ಈ ಕುರಿತು ಮೊದಲು ಟ್ವೀಟ್​ ಮಾಡಿ ಪ್ರತಿಕ್ರಿಯಿಸಿದ ಭಾಗ್​ಪತ್​ ಪೊಲೀಸರು ನಂತರ ಅದನ್ನು ಡಿಲೀಟ್​ ಮಾಡಿದ್ದಾರೆ ಮತ್ತು ಪ್ರಕರಣದ ಕುರಿತು ಮಾತನಾಡಲು ನಿರಾಕರಿಸಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಆಡಳಿತ ಮಂಡಳಿ ಸದಸ್ಯರು ನಾಟಕದ ರಿಹರ್ಸಲ್​ ವೇಳೆ ಹಾಗೆ ಮಾಡಲಾಗಿತ್ತು ಎಂದು ವಿವರಣೆ ನೀಡಿದ್ಧಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹೋಶಿಯಾರಿ ದೇವಿ ಗರ್ಲ್ಸ್ ಇಂಟರ್ ಕಾಲೇಜ್​ ಮುಖ್ಯೋಪಾಧ್ಯಾಯ ಮುನೇಶ್ ಚೌಧರಿ ಕಳೆದ ವರ್ಷ ಅಕ್ಟೋಬರ್​ ಸಮಯದಲ್ಲಿ ನಾಟಕದ ಅಭ್ಯಾಸದ ವೇಳೆ ಹುಡುಗಿಯರು ನಮಾಜ್​ ಮಾಡುವುದಿತ್ತು. ಅಂತಿಮವಾಗಿ ಆ ದೃಶ್ಯವನ್ನು ನಾಟಕದಿಂದ ತೆಗೆದುಹಾಕಲಾಯಿತು ವೈರಲ್​ ಆಗಿರುವ ವಿಡಿಯೋ ಆ ಸಮಯದಲ್ಲಿ ತೆಗೆದಿದ್ದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts