ನಾನು ಕಾಂಗ್ರೆಸ್​​ಗಿಂತ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುತ್ತೇನೆ: ಜನಾರ್ದನ ರೆಡ್ಡಿ

Gali Janardhan reddy
Published on

ಗಂಗಾವತಿ: ಎಲ್ಲರೂ ಸೇರಿ ನನ್ನನ್ನ ತುಳಿಯಲು ಯತ್ನಿಸಿದ್ರು ಆದರೆ, ಗಂಗಾವತಿಯ ಜನತೆ ನನ್ನ ಕೈ ಹಿಡಿದರು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(KRPP) ಮುಖ್ಯಸ್ಥ, ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಗಂಗಾವತಿಯಲ್ಲಿ ಮತದಾರರ ಅಭಿನಂದನಾ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ರೆಡ್ಡಿ ರಾಜಕೀಯ ಮುಗಿದೇ ಹೋಯಿತು ಅಂದುಕೊಂಡಿದ್ದವರಿಗೆ ಸರಿಯಾದ ಉತ್ತರ ನೀಡಿದ್ದೀರಿ ಎಂದಿದ್ದಾರೆ.

ಗ್ಯಾರಂಟಿಗಳಿಗೆ ಮತ ಹಾಕಿದ್ದಾರೆ

ಎಲ್ಲರೂ ಸೇರಿ ನನ್ನನ್ನ ತುಳಿಯಲು ಯತ್ನಿಸಿದ್ರು ಆದ್ರೆ ಗಂಗಾವತಿ ಜನ ನನ್ನ ಮೇಲಕ್ಕೆ ಎತ್ತಿದ್ದರು. ರೆಡ್ಡಿ ರಾಜಕೀಯ ಮುಗಿದೇ ಹೋಯಿತು ಅಂದುಕೊಂಡಿದ್ದವರಿಗೆ ಸರಿಯಾದ ಉತ್ತರ ನೀಡಿದ್ದೀರಿ. ನಿಮಗೆಲ್ಲಾ ನಾನು ನನ್ನ ಶಿರಭಾಗಿ ನಮಸ್ಕರಿಸುತ್ತೇನೆ.

ನಮ್ಮ ಪಕ್ಷದಿಂದ ನಾನೊಬ್ಬನೇ ಗೆದ್ದಿದ್ದೇನೆ. ಆದರೆ, ಸಾಕಷ್ಟು ಕಡೆ ನಮ್ಮ ಅಭ್ಯರ್ಥಿಗಳು ಉತ್ತಮ ಮತ ಪಡೆದಿದ್ದಾರೆ. ಈ ಭಾರಿ ಕಾಂಗ್ರೆಸ್ ಗ್ಯಾರಂಟಿಗಳಿಗೆ ಜನ ಮತ ನೀಡಿದ್ದಾರೆ. ಫ್ರೀ ವಿದ್ಯುತ್,10 ಕೆಜಿ ಅಕ್ಕಿಗೋಸ್ಕರ ಜನ ಮತ ಹಾಕಿದ್ದಾರೆ.

janardhan reddy

ಹೆಜ್ಜೆ ಮುಂದಿಡೋಕೆ ಬಿಡೋಲ್ಲ

ನಾನು ಅದಕ್ಕಿಂತ ಹೆಚ್ಚಾಗಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ. ನಾನು ಏನು ಮಾತು ಕೊಟ್ಟಿದ್ದೇನೆ ಅವೆಲ್ಲ ಈಡೇರಿಸುತ್ತೇನೆ. ಇಲ್ಲಾಂದ್ರೆ ಮುಂದಿನ ಭಾರಿ ಮತ ಹಾಕಬೇಡಿ. ಗಂಗಾವತಿಯನ್ನ ಮಾದರಿ ನಗರ ಮಾಡ್ತೇನೆ ಸಿಎಂ,ಮಂತ್ರಿಗಳ ಹತ್ತಿರ ಹೋಗಿ ಅಭಿವೃದ್ಧಿ ಕೆಲಸ‌ ಮಾಡಿಸುತ್ತೇನೆ. ಇಲ್ಲಾಂದ್ರೆ ಅವರಿಗೆ ಒಂದು ಹೆಜ್ಜೆ ಮುಂದಿಡೋಕೆ ಬಿಡೋಲ್ಲ.

ನೀವೆಲ್ಲ ನನಗೆ ಮತ ಹಾಕಿದ್ದೀರಾ ನಿಮ್ಮ ಕೆಲಸಕ್ಕೆ ನನ್ನನ್ನು ಹುಡುಕಿಕೊಂಡು ಬರುವ ಅವಶ್ಯಕತೆಯಿಲ್ಲ. ನಾನೇ ಪ್ರತಿ ತಿಂಗಳು ನಿಮ್ಮ ಊರುಗಳಿಗೆ ಬರುತ್ತೇನೆ ಅಲ್ಲೇ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.

ಹಣ ನೀಡಿ ಅಭಿವೃದ್ಧಿ ಮಾಡುತ್ತೇನೆ

ಗಂಗಾವತಿ ಕ್ಷೇತ್ರದ ನಾಲ್ಕು ಕಡೆ ಶಾಸಕರ ಕಚೇರಿಗಳನ್ನು ತೆರೆಯುತ್ತೇನೆ ನಾನೂ ನೀಡಿದ ಭರವಸೆಗಳನ್ನ ಈಡೇರಿಸುವೆ. ಅಂಜನಾದ್ರಿಯನ್ನ ವಿಶ್ವವೇ ತಿರುಗಿ ನೋಡುವಂತೆ ಅಭಿವೃದ್ಧಿ ಮಾಡ್ತೀನಿ. ರಾಜ್ಯ,ಕೇಂದ್ರದ ಸರ್ಕಾರದ ಸಹಕಾರದ ಜೊತೆಗೆ ನನ್ನ ವಯುಕ್ತಿಕ ಹಣ ನೀಡಿ ಅಭಿವೃದ್ಧಿ ಮಾಡುತ್ತೇನೆ.

ಗಂಗಾವತಿ ನಗರದಲ್ಲಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಮತದಾರರ ಅಭಿನಂದನಾ ಸಬೆಯಲ್ಲಿ KRPP ಮುಖ್ಯಸ್ಥ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net