

ಬೆಂಗಳೂರು: ಇಂದಿನ ಪೀಳಿಗೆ ಸಂಪೂರ್ಣವಾಗಿ ಸಾಮಾಜಿಕ ಜಾಲತಾಣದ ಮೇಲೆ ಅವಲಂಬಿತರಾಗಿದ್ದು, ಅದರಲ್ಲೂ ಪ್ರತ್ಯೇಕವಾಗಿ ಯುವಜನತೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ನಮಗೆಲ್ಲಾ ತಿಳಿದಿರುವಂತೆ ಇಂದು ಬಹುತೇಕ ಕೆಲಸಗಳು ಆನ್ಲೈನ್ನಲ್ಲೇ ನಡೆಯುತ್ತಿರುವ ಕಾರಣ, ಕಾಲ ಕ್ರಮೇಣ ಎಲ್ಲರೂ ಅಂತರ್ಜಾಲವನ್ನು ಅಧಿಕ ಸಂಖ್ಯೆಯಲ್ಲಿ ಉಪಯೋಗಿಸುತ್ತಿದ್ದಾರೆ.
ಮುಖ್ಯವಾಗಿ ಇಂದಿನ ಯುವಜನತೆ ತಮ್ಮ ಬಹುಪಾಲು ಸಮಯವನ್ನು ಸಾಮಾಜಿಕ ಜಾಲತಾಣವಾದ ವ್ಯಾಟ್ಸ್ಆ್ಯಪ್, ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ, ಸ್ನಾಪ್ ಚಾಟ್ ಹೀಗೆ ಹಲವಾರು ಆ್ಯಪ್ಗಳಲ್ಲಿ ಕಳೆಯುತ್ತಾರೆ. ಇದೆಲ್ಲದರ ಪೈಕಿ ಜನರು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಫೋಟೋ, ಕೆಲಸಗಳು ಸೇರಿದಂತೆ ಇತರೆ ವಿಷಯಗಳನ್ನು ಪೋಸ್ಟ್ ಮಾಡಿಕೊಳ್ಳುತ್ತಾರೆ. ಈ ಮೂಲಕ ಇಂತಹ ಆ್ಯಪ್ಗಳಲ್ಲಿ ಅಧಿಕ ಸಮಯವನ್ನು ವ್ಯಯಿಸುತ್ತಾರೆ.
ಈ ಎಲ್ಲಾ ಆ್ಯಪ್ಗಳಿಗೂ ಮುನ್ನ ಬಂದ ಫೇಸ್ಬುಕ್ ಇಂದಿಗೂ ಕೂಡ ಅತೀ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಿದೆ. ಹಾಗಾದ್ರೆ, ಯಾವ ದೇಶದಲ್ಲಿ ಅಧಿಕವಾಗಿ ಫೇಸ್ಬುಕ್ನ ಬಳಸಲಾಗುತ್ತಿದೆ? ಯಾವ ರಾಷ್ಟ್ರ ಅಗ್ರಸ್ಥಾನದಲ್ಲಿದೆ? ಎಂಬುದರ ಮಾಹಿತಿಯನ್ನು "ಗ್ಲೋಬಲ್ ಇಂಡೆಕ್ಸ್" ಟಾಪ್ 15 ಪಟ್ಟಿ ಮೂಲಕ ಪ್ರಕಟಿಸಿದೆ.
ಹೆಚ್ಚು ಬಳಕೆದಾರರನ್ನು ಹೊಂದಿರುವ ಟಾಪ್ 15 ದೇಶಗಳಿವು (2023):
1. ಭಾರತ - 314 ಮಿಲಿಯನ್
2. ಯುನೈಟೆಡ್ ಸ್ಟೇಟ್ಸ್ - 175 ಮಿಲಿಯನ್
3. ಇಂಡೋನೇಷ್ಯಾ - 120 ಮಿಲಿಯನ್
4. ಬ್ರೆಜಿಲ್ - 109 ಮಿಲಿಯನ್
5. ಮೆಕ್ಸಿಕೋ - 83.75 ಮಿಲಿಯನ್
6. ಫಿಲಿಪೈನ್ಸ್ - 80.3 ಮಿಲಿಯನ್
7. ವಿಯೆಟ್ನಾಂ - 66.2 ಮಿಲಿಯನ್
8. ಥೈಲ್ಯಾಂಡ್ - 48.1 ಮಿಲಿಯನ್
9. ಬಾಂಗ್ಲಾದೇಶ - 43.25 ಮಿಲಿಯನ್
10. ಈಜಿಪ್ಟ್ - 42 ಮಿಲಿಯನ್
11. ಪಾಕಿಸ್ತಾನ - 37.3 ಮಿಲಿಯನ್
12. ಯುನೈಟೆಡ್ ಕಿಂಗ್‌ಡಮ್ - 34.4 ಮಿಲಿಯನ್
13. ಕೊಲಂಬಿಯಾ - 33.5 ಮಿಲಿಯನ್
14. ಟರ್ಕಿ - 32.8 ಮಿಲಿಯನ್
15. ಫ್ರಾನ್ಸ್ - 30.4 ಮಿಲಿಯನ್