VIDEO | ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರ ಕಿತ್ತಾಟ! ಚಪ್ಪಲಿ ಹಿಡಿದು ಬಡಿದಾಡಿಕೊಂಡ ಮಹಿಳೆಯರು

Untitled-design-42
Published on

ಬೆಂಗಳೂರು: ರಾಜ್ಯ ಸಾರಿಗೆಯಾದ ಬಿಎಂಟಿಸಿ ಬಸ್‌ನಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರು ಪರಸ್ಪರ ತೀವ್ರ ಜಟಾಪಟಿ ನಡೆಸಿದ ದೃಶ್ಯ ಸ್ಥಳೀಯರ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಘಟನೆ ಯಾವಾಗ ಸಂಭವಿಸಿದೆ ಎಂಬುದರ ಬಗ್ಗೆ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಜಗಳವನ್ನು ಸಹ ಪ್ರಯಾಣಿಕರು ಮೂಕ ಪ್ರೇಕ್ಷಕರಂತೆ ನೋಡುತ್ತಿರುವುದು ಕಂಡುಬಂದಿದೆ.

ಫೆಬ್ರವರಿ 8ರಂದು ಎಕ್ಸ್​​ನಲ್ಲಿ (ಈ ಹಿಂದಿನ ಟ್ವಿಟರ್) ಈ ವೀಡಿಯೊ ವೈರಲ್ ಆಗಿದ್ದು, ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಮಧ್ಯೆ ಕಿಟಕಿ ಸರಿಸುವ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು, ಜಟಾಪಟಿ ತೀವ್ರವಾಗಿದೆ. ಪರಸ್ಪರ ಬಡಿದಾಡಿಕೊಳ್ಳಲು ಪ್ರಾರಂಭಿಸಿದ ಮಹಿಳಾ ಪ್ರಯಾಣಿಕರು, ಚಪ್ಪಲಿ ಹಿಡಿದು ಪರಸ್ಪರ ಕಪಾಳಮೋಕ್ಷ ಮಾಡಿದ್ದಾರೆ.

ಇಬ್ಬರ ಜಗಳವನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದ ಸಹ ಪ್ರಯಾಣಿಕರ ಮಧ್ಯೆ ಮಹಿಳೆಯರನ್ನು ತಡೆದ ಬಸ್​ ನಿರ್ವಾಹಕರು, ಕಡೆಗೂ ಇಬ್ಬರನ್ನೂ ಬೇರ್ಪಡಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು, ಕಮೆಂಟ್ ಮಾಡುವ ಮೂಲಕ ಲೇವಡಿ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net