

ಢಾಕಾ: ಸ್ಯಾಫ್ ಮಹಿಳೆಯರ 19 ವಯೋಮಿತಿ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಗುರುವಾರ ನಡೆದ ಫೈನಲ್ನಲ್ಲಿ ಭಾರತ ತಂಡವನ್ನು ವಿಜಯಿ ಎಂದು ಘೋಷಿಸಿದರೂ, ಅಂತಿಮವಾಗಿ ಆತಿಥೇಯ ಬಾಂಗ್ಲಾದೇಶದೊಂದಿಗೆ ಜಂಟಿ ಚಾಂಪಿಯನ್ ಎಂದು ಟ್ರೋಫಿ ಹಂಚಲಾಯಿತು!
ಪಂದ್ಯ 1-1ರಿಂದ ಡ್ರಾಗೊಂಡ ಬಳಿಕ ಪೆನಾಲ್ಟಿ ಶೂಟೌಟ್ನಲ್ಲಿ ಗೋಲುಕೀಪರ್ ಸಹಿತ ಎಲ್ಲರೂ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದ್ದರಿಂದ 11-11 ಸಮಬಲಗೊಂಡಿತು. ಆಗ ರೆಫ್ರಿ ಉಭಯ ತಂಡಗಳ ನಾಯಕರನ್ನು ಕರೆದು ಟಾಸ್ ಹಾಕಿದಾಗ ಭಾರತ ಗೆಲುವು ಸಾಧಿಸಿತು.
ಆದರೆ ಈ ನಿರ್ಧಾರವನ್ನು ಒಪ್ಪಿಕೊಳ್ಳದ ಬಾಂಗ್ಲಾ ಆಟಗಾರ್ತಿಯರು ಮೈದಾನ ತೊರೆಯದೆ 1 ಗಂಟೆ ಕಾಲ ಪ್ರತಿಭಟನೆ ನಡೆಸಿದರು. ಅಂತಿಮವಾಗಿ ಭಾರತ ತಂಡದ ಮನವೊಪ್ಪಿಸಿ ಜಂಟಿ ಚಾಂಪಿಯನ್ ಎಂದು ಘೋಷಿಸಲಾಯಿತು.