

Allu Arjun Grandmother: ದಕ್ಷಿಣ ಭಾರತದ ಸೂಪರ್‌ಸ್ಟಾರ್ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಲ್ಲು ಅರ್ಜುನ್ ಅವರ ಅಜ್ಜಿ ಶ್ರೀಮತಿ ಅಲ್ಲು ಕನಕರತ್ನಂ ಅವರು ಇಂದು (ಆ.30) ನಿಧನರಾಗಿದ್ದಾರೆ. ಅವರ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರೀಕರಣಕ್ಕಾಗಿ ಮುಂಬೈನಲ್ಲಿದ್ದ ಅಲ್ಲು ಅರ್ಜುನ್ ತಕ್ಷಣ ಅಲ್ಲಿಂದ ಹೊರಟು ಹೈದರಾಬಾದ್ ತಲುಪಿದ್ದಾರೆ. ಮತ್ತೊಂದೆಡೆ ಮೈಸೂರಿನಲ್ಲಿ ಶೂಟಿಂಗ್ನಲ್ಲಿದ್ದ ರಾಮ್ ಚರಣ್ ತಮ್ಮ ಮುಂಬರುವ ಚಿತ್ರ 'ಪೆಡ್ಡಿ' ಚಿತ್ರೀಕರಣವನ್ನು ರದ್ದುಗೊಳಿಸಿದ್ದು, ಅವರು ಕೂಡ ಕೆಲ ಕ್ಷಣಗಳಲ್ಲಿ ಆಗಮಿಸಲಿದ್ದಾರೆ.
ಅವರಿಗೆ 94 ವರ್ಷ ವಯಸ್ಸಾಗಿತ್ತು. ಕೆಲ ಸಮಯದಿಂದ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಮನೆಯಲ್ಲಿಯೇ ಕೊನೆಯುಸಿರೆಳೆದರು ಎನ್ನಲಾಗಿದೆ. ಅಲ್ಲು ಕನಕರತ್ನಮ್ಮ ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ತೆಲುಗು ನಟ ಚಿರಂಜೀವಿ ತಮ್ಮ ಅತ್ತೆಯ ನಿಧನದ ಬಗ್ಗೆ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ನಮ್ಮ ಅತ್ತೆ ಶ್ರೀ ಅಲ್ಲು ರಾಮಲಿಂಗಯ್ಯ ಅವರ ಪತ್ನಿ ಕನಕರತ್ನಮ್ಮ ಅವರ ನಿಧನವು ಅತ್ಯಂತ ಹೃದಯವಿದ್ರಾವಕವಾಗಿದೆ. ಅವರು ನಮ್ಮ ಕುಟುಂಬಗಳಿಗೆ ತೋರಿಸಿದ ಪ್ರೀತಿ, ಧೈರ್ಯ ಮತ್ತು ಜೀವನ ಮೌಲ್ಯಗಳು ನಮಗೆ ಶಾಶ್ವತವಾಗಿ ಸ್ಫೂರ್ತಿಯಾಗಿರುತ್ತವೆ. ಅವರ ಪವಿತ್ರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ. ಬರೆದಿದ್ದಾರೆ.
(ಏಜೆನ್ಸೀಸ್)