ನಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ : ರಾಜಸ್ತಾನ ಸಿಎಂ ಭಜನ್ ಲಾಲ್ ಶರ್ಮಾ | Paper leak

untitled-design-2025-08-30t121012415-68b29ce14301e
Published on

Paper leak : ಈ ಹಿಂದೆ ಕಾಂಗ್ರೆಸ್​ ಸರ್ಕಾರ ಆಡಳಿತದಲ್ಲಿದ್ದಾಗ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನೇಮಕಾತಿಗಳಲ್ಲಾದ ವಂಚನೆಗಳನ್ನು ನಮ್ಮ ಸರ್ಕಾರ ಬಹಿರಂಗಪಡಿಸಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಶುಕ್ರವಾರ (ಆಗಸ್ಟ್​29) ಹೇಳಿಕೆ ನೀಡಿದ್ದಾರೆ.

ತೋಡರೈಸಿಂಗ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶರ್ಮಾ ನೇಮಕಾತಿ ವಿಚಾರದಲ್ಲಿ ಹಗರಣಗಳ ವಿರುದ್ಧ ಕ್ರಮಕೈಗೊಳ್ಳಲು ಕಾಂಗ್ರೆಸ್​ ಸರ್ಕಾರ ವಿಫಲವಾಗಿದ್ದು, ಯುವಕರಿಗೆ ದ್ರೋಹ ಮಾಡಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಉದ್ಯೋಗಗಳನ್ನು ವಂಚಿಸುವವರನ್ನು ಬಂಧಿಸಲಾಗುತ್ತಿದೆ ಮತ್ತು ಅವರ ಪಾತ್ರವನ್ನು ಬಹಿರಂಗಪಡಿಸಲಾಗುತ್ತಿದೆ ಎಂದರು.

ಈ ಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ನ್ಯಾಯಾಲಯ ರದ್ದುಗೊಳಿಸಿದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (SI) ನೇಮಕಾತಿ ಪರೀಕ್ಷೆಯನ್ನು ಮುಖ್ಯಮಂತ್ರಿ ಉಲ್ಲೇಖಿಸಿದ್ದು, ಕಾಂಗ್ರೆಸ್​ ಸರ್ಕಾರ 2023ರವರೆಗೂ ಈ ವಿಚಾರದ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೇಳಿದರು. ನಮ್ಮ ಸರ್ಕಾರ ಆಡಳಿತಕ್ಕೆ ಬಂದ ನಂತರ, ಡಿಸೆಂಬರ್​ 16 ರಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ನಂತರ ಇದು 56 ತರಬೇತಿ SI ಗಳನ್ನು ಮತ್ತು ಇತರರನ್ನು ಬಂಧಿಸಿತು. ನಮ್ಮ ಸರ್ಕಾರದ ಕ್ರಮವು ನ್ಯಾಯಾಲಯದ ನಿರ್ಧಾರಕ್ಕೆ ಅಡಿಪಾಯ ಹಾಕಿದೆ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕರನ್ನು ಟೀಕಿಸಿದ ಶರ್ಮಾ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಮಾಜಿ ಮುಖ್ಯಮಂತ್ರಿಯ ವೈಯಕ್ತಿಕ ಅಧಿಕಾರಿಯನ್ನು ತಲುಪಿದೆ. ಇಂತಹ ಅನೇಕ ದೊಡ್ಡ ಮೀನುಗಳು ಮುಂದೆ ಹಿಡಿಯಲ್ಪಡುತ್ತವೆ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ, ಕಳೆದ ಒಂದೂವರೆ ವರ್ಷಗಳಲ್ಲಿ, ಒಂದೇ ಒಂದು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಹಾಗೆಯೇ ಪರೀಕ್ಷೆಗಳು ಪಾರದರ್ಶಕತೆಯಲ್ಲಿ ನಡೆಯುತ್ತಲಿವೆ ಎಂದು ಶರ್ಮಾ ಬಹಿರಂಗಪಡಿಸಿದ್ದಾರೆ.

ರಾಜ್ಯಸರ್ಕಾರದ 'ಏಕ್ ಪೆಡ್ ಮಾ ಕೆ ನಾಮ್' ಮತ್ತು 'ಹರಿಯಾಲೋ ರಾಜಸ್ಥಾನ' ಅಭಿಯಾನಗಳ ಡಿಯಲ್ಲಿ 1.85 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಗುವುದು ಹಾಗೇಯೇ ರಾಜಸ್ಥಾನವನ್ನು ಹಸಿರಾಗಿಡಲು 5 ವರ್ಷಗಳಲ್ಲಿ ಸುಮಾರು 50 ಕೋಟಿ ಸಸಿಗಳನ್ನು ನೆಡುವುದು ನಮ್ಮ ಗುರಿ ಎಂದು ಈ ಸಭೆಯಲ್ಲಿ ಸೂಚಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net