

Heart Attack: ಹದಿ ಹರೆಯದ ವಯಸ್ಸಿನವರಿಗೆ ಹೃದಯಾಘಾತದಿಂದ ಘಟನೆಗಳು ಹೆಚ್ಚುತ್ತಿದ್ದು, ತಮಿಳುನಾಡಿನ ಚೆನ್ನೈನಲ್ಲಿ ಹಾರ್ಟ್ ಸರ್ಜನ್ವೊಬ್ಬರು ಆಸ್ಪತ್ರೆಯಲ್ಲಿ ರೋಗಿಗಳ ವಾರ್ಡ್ ರೌಂಡ್ಸ್ ಸಮಯದಲ್ಲಿ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಶನಿವಾರ(ಆಗಸ್ಟ್ 30) ವರದಿಯಾಗಿದೆ.
ಡಾ. ಗ್ರಾಡ್ಲಿನ್ ರಾಯ್(39) ಚೆನ್ನೈನ ಸವೀತಾ ವೈದ್ಯಕೀಯ ಕಾಲೇಜಿನ ಹೃದಯ ಶಸ್ತ್ರಚಿಕಿತ್ಸಕ ಆಗಸ್ಟ್ 27ರಂದು ರೌಂಡ್ಸ್ ಸಮಯದಲ್ಲಿ ಹೃದಯಾಘಾತದಿಂದ ಮೃತಪಟ್ಟವರು. ಪತ್ನಿ ಮತ್ತು ಓರ್ವ ಚಕ್ಕಮಗುವನ್ನು ಹಗಲಿದ್ದಾರೆ. ಅವರ ಅಕಾಲಿಕ ಮರಣವು ವೈದ್ಯಕೀಯ ಸಮುದಾಯಕ್ಕೆ ಆಘಾತವನ್ನುಂಟುಮಾಡಿದೆ.
ರೌಂಡ್ಸ್ ಸಮಯದಲ್ಲಿ ವಾರ್ಡ್ನಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಯೆ ಇತರೆ ಸಿಬ್ಬಂದಿ ಸಿಪಿಆರ್, ತುರ್ತು ಆಂಜಿಯೋಪ್ಲಾಸ್ಟಿಯೊಂದಿಗೆ ಸ್ಟೆಂಟಿಂಗ್, ಇಂಟ್ರಾ-ಏಯಾರ್ಟಿಕ್ ಬಲೂನ್ ಪಂಪ್ ಮತ್ತು ಇಸಿಎಂಒ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಹೈದರಾಬಾದ್ನ ನ್ಯೂರಲಾಜಿಸ್ಟ್ ಡಾ.ಸುಧೀರ್ ಕುಮಾರ್ ಈ ಕುರಿತು ಎಕ್ಸ್ನಲ್ಲಿ ಮಾಹಿತಿ ನೀಡಿದ್ದು, ವೈದ್ಯರು ಎದುರಿಸುವ ತೀವ್ರ ಒತ್ತಡ ಮತ್ತು ದೀರ್ಘ ಕೆಲಸದ ಸಮಯವು ಇಂತಹ ಘಟನೆಗಳಿಗೆ ಕಾರಣವಾಗಬಹುದು. ಈ ಘಟನೆಯು ಭಾರತದ ಯುವ ವೈದ್ಯಕೀಯ ವೃತ್ತಿಪರರ ಆರೋಗ್ಯ ಮತ್ತು ಕೆಲಸ-ಜೀವನ ಸಮತೋಲನದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ತಜ್ಞರು ವೈದ್ಯರು ಇಂತಹ ದುರಂತಗಳನ್ನು ತಡೆಗಟ್ಟಲು ಸ್ವಯಂ ಆರೈಕೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿದ್ದಾರೆ. (ಏಜೆನ್ಸೀಸ್)