

Trump Tariffs: ಅಮೆರಿಕಾ ವ್ಯಾಪಾರ ಸಲಹೆಗಾರ ಪೀಟರ್ ನವರೊ ಅವರ ಇತ್ತೀಚಿನ ಭಾರತ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ರಾಜತಾಂತ್ರಿಕ ಅಧಿಕಾರಿ ವಿಕಾಸ್ ಸ್ವರೂಪ್, ಭಾರತ ಯಾವಾಗಲೂ ಕಾರ್ಯತಂತ್ರದ ಸ್ವಾಯತ್ತತೆಯ ತತ್ವವನ್ನು ಅನುಸರಿಸಿದ್ದು, ಯಾರ ಆದೇಶಕ್ಕೂ ತಲೆಬಾಗುವುದಿಲ್ಲ ಎಂದು ತಿಳಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾಗಿ ಸೇವೆ ಸಲ್ಲಿಸಿದ ಅನುಭವವಿರುವ ಸ್ವರೂಪ್, ಅಮೆರಿಕಾ ಅಧ್ಯಕ್ಷ ಆಡಳಿತ ಭಾರತದ ಮೇಲೆ ಎಲ್ಲಾ ರೀತಿಯ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದು, ಭಾರತವು ಹೆಮ್ಮೆಯ ರಾಷ್ಟ್ರ, ಯಾವಾಗಲೂ ಕಾರ್ಯತಂತ್ರದ ಸ್ವಾಯತ್ತತೆಯ ತತ್ವವನ್ನು ಅನುಸರಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಜೆಡಿಎಸ್ನಿಂದ ಧರ್ಮಸ್ಥಳ ಸತ್ಯ ಯಾತ್ರೆ 31ಕ್ಕೆ
ಭಾರತ-ಅಮೆರಿಕ ವ್ಯಾಪಾರ ಸಂಬಂಧಗಳ ಕುರಿತು ಪ್ರತಿಕ್ರಿಯಿಸಿದ ಸ್ವರೂಪ್, ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಂಡಾಗ ನಿರೀಕ್ಷೆಗಳು ಹೆಚ್ಚಾಗಿದ್ದವು, ಆದರೆ ಒಪ್ಪಂದ ಎಂದಿಗೂ ಕಾರ್ಯರೂಪಕ್ಕೆ ಬರಲಿಲ್ಲ. ಟ್ರಂಪ್ ನಿಜವಾಗಿಯೂ ಪ್ರಧಾನಿ ಮೋದಿಯವರನ್ನು ಗೌರವಿಸುತ್ತಾರೆ, ಆದ್ದರಿಂದ ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದವು ಬಹಳ ಬೇಗನೆ ಒಂದು ಹಂತಕ್ಕೆ ಬರಬಹುದೆಂದು ಅನೇಕರು ನಿರೀಕ್ಷಿಸಿದ್ದರು ಆದರೆ ಅದು ಸಾಧ್ಯವಾಗಲಿಲ್ಲ ಎಂದರು.
ಎರಡು ದೇಶಗಳು ಪರಸ್ಪರ ಪರಿಹಾರವನ್ನು ಕಂಡುಕೊಳ್ಳಲು ಈಗಲೂ ಸಮಯವಿದ್ದು, ಆದರೆ, ಅಮೆರಿಕಾದಿಂದ ಬರುತ್ತಿರುವ ಹೇಳಿಕೆಗಳು ಅದಕ್ಕೆ ಆಸ್ಪದ ನೀಡುತ್ತಿಲ್ಲ ಎಂದರು.
ನವಾರೊ ಹೇಳಿದ್ದೇನು..?
ಟ್ರಂಪ್ ಭಾರತೀಯ ಆಮದುಗಳ ಮೇಲೆ ಶೇ50 ರಷ್ಟು ಸುಂಕ ಹೆಚ್ಚಿಳ ಮಾಡಿದ ಕೆಲವೇ ಘಂಟೆಗಳಲ್ಲಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ನವರೊ, ಅಧ್ಯಕ್ಷ ಟ್ರಂಪ್ ಅವರ ಭಾರತೀಯ ಆಮದುಗಳ ಮೇಲಿನ ಶೇಕಡಾ 50 ರಷ್ಟು ಸುಂಕಗಳು ಈಗ ಜಾರಿಗೆ ಬಂದಿವೆ. ಭಾರತವು ಪುಟಿನ್ ಅವರ ಯುದ್ಧ ಯಂತ್ರಕ್ಕೆ ವ್ಯಾಪಾರದ ಮೂಲಕ ಹಣ ಒದಗಿಸುತ್ತಿದೆ ಎಂದು ಆರೋಪಿಸಿದ್ದರು.(ಏಜೆನ್ಸೀಸ್)