ಹೆಣ್ಣಿಗೇಕೆ ಹೊರೆ?; ಆರ್​ಎಸ್​​ಎಸ್​​ ಮುಖ್ಯಸ್ಥ​ ಭಾಗವತ್​ ಹೇಳಿಕೆಗೆ ಸಂಸದ ಓವೈಸಿ ಖಂಡನೆ | Asaduddin Owaisi

Asaduddin Owaisi
Published on

Asaduddin Owaisi: ಭಾರತದ ಪ್ರತಿ ಕುಟುಂಬವೂ ಮೂವರು ಮಕ್ಕಳನ್ನು ಹೊಂದಬೇಕು ಎಂದು ಗುರುವಾರ (ಆಗಸ್ಟ್ 28)​ ಹೇಳಿಕೆ ನೀಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಎಐಎಮ್​​ಐಎಮ್​ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಓವೈಸಿ, ಬೇರೆಯವರ ಕುಟುಂಬದ ವಿಷಯದಲ್ಲಿ ಮೂಗು ತೂರಿಸಲು ನೀವು ಯಾರು? ತಮ್ಮದೇ ಆದ ವಿಭಿನ್ನ ಆದ್ಯತೆಗಳನ್ನು ಹೊಂದಿರಬಹುದಾದ ಭಾರತೀಯ ಮಹಿಳೆಯರ ಮೇಲೆ ನೀವು ಏಕೆ ಹೊರೆ ಹಾಕಲು ಪ್ರಯತ್ನಿಸುತ್ತಿದ್ದೀರಿ? ಎಂದು ಪ್ರಶ್ನಿಸಿದರು.

2011 ರ ಜನಗಣತಿಯ ದತ್ತಾಂಶವನ್ನು ಉಲ್ಲೇಖಿಸಿದ ಓವೈಸಿ, ಮುಸ್ಲಿಂ ಜನಸಂಖ್ಯಾ ಬೆಳವಣಿಗೆಯ ದರವು ಈಗಾಗಲೇ ಕುಸಿಯುತ್ತಿದ್ದು, ಸುಮಾರು ಶೇ.80 ರಷ್ಟಿರುವ ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಮರ ಜನಸಂಖ್ಯೆ ಶೇ. 14.23 ರಷ್ಟಿದೆ ಎಂದು ಹೇಳಿದರು.

ಆರ್‌ಎಸ್‌ಎಸ್ ಮತ್ತು ಅದರ ಬೆಂಬಲಿತ ಸಂಘಟನೆಗಳು ದ್ವೇಷವನ್ನು ಹರಡುವುದರಲ್ಲಿಯೇ ನಿರತರಾಗಿದ್ದು, ಮುಸ್ಲಿಮರ ವಿರುದ್ಧದ ದ್ವೇಷವನ್ನು ಶಾಶ್ವತಗೊಳಿಸುವುದು ಅವುಗಳ ಪ್ರಮುಖ ಉದ್ದೇಶವಾಗಿದೆ ಎಂದರು. ಭಾಗವತ್ ಈ ಹಿಂದೆ ಮುಸ್ಲಿಮರನ್ನು ಚೋರಿ ಕಾ ಸಮಾನ್ ಮತ್ತು ಮೊಘಲ್ ಬಾದ್‌ಶಾ ಕಿ ಔಲಾದ್ ಎಂದು ಕರೆದಿದ್ದನ್ನು ನೆನಪಿಸಿಕೊಂಡ ಓವೈಸಿ, ಮುಸ್ಲಿಮರ ಬಹಿರಂಗ ನರಮೇಧ, ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಕರೆ ನೀಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.

ಮೋಹನ್ ಭಾಗವತ್​ ಹೇಳಿದ್ದೇನು..?

ಜನಸಂಖ್ಯೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಭಾರತೀಯ ಕುಟುಂಬಗಳು ಮೂರು ಮಕ್ಕಳನ್ನು ಹೊಂದಿರಬೇಕು ಎಂದು ಭಾಗವತ್ ಗುರುವಾರ ಹೇಳಿಕೆ ನೀಡಿದ್ದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net