More

    ಹೃತಿಕ್​ ರೋಷನ್​ @50; ಚುಂಬಿಸಿ ಶುಭಕೋರಿದ್ದು ಯಾರು ಗೊತ್ತೇ?

    ಮುಂಬೈ: ಬಾಲಿವುಡ್​ನ ಗ್ರೀಕ್​ ಗಾಡ್​ ಎಂದೇ ಹೆಸರುವಾಸಿಯಾಗಿರುವ ನಟ ಹೃತಿಕ್​ ರೋಷನ್​ ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2000ನೇ ಇಸವಿಯಲ್ಲಿ ಕಹೋ ನಾ ಪ್ಯಾರ್​ ಹೈ ಚಿತ್ರದ ಮೂಲಕ ಬಾಲಿವುಡ್​ ಅಂಗಳ ಪ್ರವೇಶಿಸಿದ ಅವರು ರಾತ್ರೋರಾತ್ರಿ ಸ್ಟಾರ್​ ಪಟ್ಟ ಗಿಟ್ಟಿಸಿಕೊಂಡಿದ್ದರು.  ಫಿಟ್‌ನೆಸ್ ಮತ್ತು ನೃತ್ಯ ಶೈಲಿಗೆ ಹೆಸರುವಾಸಿಯಾಗಿರುವ ಹೃತಿಕ್ ವಿಶ್ವದ ಸುಂದರ ನಟರ ಟಾಪ್ 10 ಪಟ್ಟಿಯಲ್ಲಿದ್ದಾರೆ.

    ಹೃತಿಕ್​ ರೋಷನ್​ ಮತ್ತು ಸುಸ್ಸಾನೇ ಖಾನ್​ ವಿಚ್ಛೇದನ ಪಡೆದು ವರ್ಷಗಳೇ ಕಳೆದಿವೆ. ಮೊದಲಿಗೆ ಕಂಗನಾ ರಣಾವತ್​ ಅವರ ಜೊತೆ ಹೃತಿಕ್​ ಹೆಸರು ತಳಕು ಹಾಕಿಕೊಂಡಿತ್ತು. ಆದರೆ, ಇಬ್ಬರು ನಟರು ಈ ಸುದ್ದಿಯನ್ನು ನಿರಾಕರಿಸಿದ್ದರು. ಸದ್ಯ  ಗಾಯಕಿ ಸಬಾ ಅಜಾದ್ ಜೊತೆ ಲಿವ್ ಇನ್​ ರಿಲೇಷನ್​ಶಿಪ್​ನಲ್ಲಿರುವ ಹೃತಿಕ್​ ರೋಷನ್​ ಜನುಮದಿನದ ಪ್ರಯುಕ್ತ ಗೆಳತಿ ವಿಶೇಷ ಪೋಸ್ಟ್​ ಮೂಲಕ ಶುಭಕೋರಿದ್ದಾರೆ.

    ತಾನಿ ಹಾಗೂ ಹೃತಿಕ್​ ರೋಷನ್​ ಕಿಸ್​ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ಸಬಾ ಅಜಾದ್​, ಸೂರ್ಯನ ಸುತ್ತ 50 ಸುತ್ತುಗಳನ್ನು ಸತ್ತಿರುವ ನೀವು ಎಂತಹ ಅದ್ಭುತ ಜೀವನವನ್ನು ನಡೆಸಿದ್ದೀರಿ. ಇದು 100ಕ್ಕೆ ತಿರುಗಲಿ. ನನ್ನ ಪ್ರೀತಿಯ ಬೆಳಕಿಗೆ ಜನುಮದಿನದ ಶುಭಾಶಯಗಳು ಎಂದು ಸಬಾ ಅಜಾದ್​ ತನ್ನ ಪ್ರಿಯಕರ ಹೃತಿಕ್​ ರೋಷನ್​ಗೆ ಶುಭ ಕೋರಿದ್ದಾರೆ.

    ಇದನ್ನೂ ಓದಿ: ಸತ್ತು ಹೋಗಿದ್ದರೂ ಮುಷರಫ್​ಗೆ ಗಲ್ಲು ಶಿಕ್ಷೆ!: ಇದೆಂಥಾ ತೀರ್ಪು?

    ಇತ್ತ ಹೃತಿಕ್​ ಜನುಮದಿನದ ಪ್ರಯುಕ್ತ ಶುಭಾಶಯ ಕೋರಿರುವ ಮಾಜಿ ಪತ್ನಿ ಸುಸ್ಸಾನೇ ಖಾನ್​, ತಮ್ಮ ಮಕ್ಕಳಾದ ಹೃದಾನ್ ಮತ್ತು ಹ್ರೇಹಾನ್ ಅವರೊಂದಿಗೆ ಹೃತಿಕ್​ ಒಳಗೊಂಡಿರುವ ವಿಡಿಯೋ ಒಂದನ್ನು ಪೋಸ್ಟ್​ ಮಾಡಿ ಶುಭ ಕೋರಿದ್ದಾರೆ. ಹ್ಯಾಪಿ ಹ್ಯಾಪಿಯೆಸ್ಟ್ ಬರ್ತ್‌ಡೇ ರೈ.. ನೀವು ರೇ ಮತ್ತು ರಿಡ್ಜ್‌ಗೆ ನೀಡುವ ಬುದ್ಧಿವಂತಿಕೆಯ ಪ್ರೀತಿ ಮತ್ತು ಬದ್ಧತೆಯ ಸಮೃದ್ಧಿಯೊಂದಿಗೆ ನೀವು ನಿಜವಾಗಿಯೂ ನಾನು ನಿಮಗೆ ಇನ್ನೂ ಹೆಚ್ಚಿನ ಯಶಸ್ಸನ್ನು ಬಯಸುತ್ತೇನೆ, ದೇವರು ನಿಮ್ಮನ್ನು ಅಪಾರವಾಗಿ ಆಶೀರ್ವದಿಸಲಿ ಎಂದು ಶುಭಕೋರಿದ್ದಾರೆ.

    ಇತ್ತ ಪ್ರಿಯತಮೆ ಹಾಗೂ ಗೆಳತಿ ಶುಭಕೋರಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇತ್ತ ಕಿಸ್ಸಿಂಗ್​ ವಿಡಿಯೋ ವೈರಲ್​ ಆಗಿದ್ದು, ಶುಭಸುದ್ದಿ ಯಾವಾಗ ಕೊಡುತ್ತೀರಾ ಎಂದು ಕಮೆಂಟ್​ ಮೂಲಕ ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts