More

    ಕೋಮಲ್​ ಸಿನಿಮಾ ಬಗ್ಗೆ ಮೋದಿ ಮಾತಾಡಿದ್ದಾರೆ ನೋಡಿ …

    ಬೆಂಗಳೂರು: ‘ಕೆಂಪೇಗೌಡ 2’ ಚಿತ್ರದ ನಂತರ ಒಂದು ವರ್ಷದಿಂದ ಸುಮ್ಮನಿದ್ದ ಕೋಮಲ್​, ಇದೀಗ ಮತ್ತೆ ಬಣ್ಣ ಹಚ್ಚುವುದಕ್ಕೆ ತಯಾರಾಗುತ್ತಿದ್ದಾರೆ. ಕ್ರಿಸ್ಟಲ್​ ಪಾರ್ಕ್​ ಸಿನಿಮಾಸ್​ನ ಟಿ.ಆರ್. ಚಂದ್ರಶೇಖರ್​ ನಿರ್ಮಾಣದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಇದನ್ನೂ ಓದಿ: ವಿಜಯ್​ ಚಿತ್ರಕ್ಕೆ ಗುಡ್​ಬೈ ಹೇಳಿದ್ರಾ ಮುರುಗದಾಸ್​?

    ಇದು ಹಳೆಯ ಸುದ್ದಿ. ಹೊಸ ಸುದ್ದಿ ಏನೆಂದರೆ, ಈ ಚಿತ್ರದ ಟೈಟಲ್​ ಸೋಮವಾರ ಬೆಳಿಗ್ಗೆ ಯೂಟ್ಯೂಬ್​ನ ಕ್ರಿಸ್ಟಲ್​ ಪಾರ್ಕ್​ ಸಿನಿಮಾಸ್​ ಚಾನಲ್​ನಲ್ಲಿ ಬಿಡುಗಡೆಯಾಗುತ್ತಿದೆ. ಈ ವಿಷಯವನ್ನು ತಿಳಿಸುವುದಕ್ಕೆ ಚಿತ್ರತಂಡದವರು ವಿಶೇಷವಾದ ವಿಡಿಯೋವಂದನ್ನು ಮಾಡಿದ್ದಾರೆ.

    ಈ ವಿಡಿಯೋದಲ್ಲಿ ಖ್ಯಾತ ಮಿಮಿಕ್ರಿ ಕಲಾವಿದ ಮಿಮಿಕ್ರಿ ಗೋಪಿ ಅವರು ಪ್ರಧಾನ ಮಂತ್ರಿ ಮೋದಿ, ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ ಮತ್ತು ಎಚ್​.ಡಿ. ಕುಮಾರಸ್ವಾಮಿ ಅವರ ಶೈಲಿಯಲ್ಲಿ ಚಿತ್ರದ ಟೈಟಲ್​ ಬಿಡುಗಡೆ ಆಗುತ್ತದೆ ಎಂದು ಹೇಳಿದ್ದಾರೆ.

    ರಾಜಕರಾಣಿಗಳನ್ನು ಅನುಕರಣೆ ಮಾಡುವುದರಲ್ಲಿ ಜನಪ್ರಿಯರಾಗಿರುವ ಗೋಪಿ, ಬಹಳ ಚೆನ್ನಾಗಿ ಈ ನಾಲ್ವರು ಜನಪ್ರಿಯ ರಾಜಕಾರಣಿಗಳ ಶೈಲಿಯಲ್ಲಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಟೈಟಲ್​ ಬಿಡುಗಡೆ ಬಗ್ಗೆ ಒಂದಿಷ್ಟು ಅಪ್​ಡೇಟ್​ಗಳನ್ನು ಕೊಟ್ಟಿದ್ದಾರೆ.

    ಇದನ್ನೂ ಓದಿ: ಚತ್ತೀಸ್​ಗಡದ ಕರೊನಾ ವಾರಿಯರ್ಸ್​ಗೆ ಶಾರೂಖ್​ ಏನ್​ ಕೊಟ್ರು? ಇಲ್ಲಿದೆ ಡೀಟೇಲ್ಸ್​ …

    ಅಂದಹಾಗೆ, ಈ ಚಿತ್ರವನ್ನು ಕೆ.ಎಸ್​. ರಾಜಶೇಖರ್​ ಅವರು ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶ್ರೀಧರ್​ ವಿ ಸಂಭ್ರಮ್​ ಅವರ ಸಂಗೀತ ಮತ್ತು ನವೀನ್​ ಕುಮಾರ್​ ಅವರ ಛಾಯಾಗ್ರಹಣವಿದೆ. ಚಿತ್ರದ ಬಗ್ಗೆ ಇನ್ನಷ್ಟು ಅಪ್​ಡೇಟ್​ಗಳು ಸದ್ಯದಲ್ಲೇ ಸಿಗಲಿವೆ.

    ‘ಯುವರತ್ನ’ ಮೋಷನ್​ ಪೋಸ್ಟರ್​ ಬಿಡುಗಡೆ; ಇದು ಅಭಿಮಾನಿಗಳ ಉಡುಗೊರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts