ಚತ್ತೀಸ್​ಗಡದ ಕರೊನಾ ವಾರಿಯರ್ಸ್​ಗೆ ಶಾರೂಖ್​ ಏನ್​ ಕೊಟ್ರು? ಇಲ್ಲಿದೆ ಡೀಟೇಲ್ಸ್​ ...

Shahrukh Khan - Final
Published on

ಮುಂಬೈ: ಮಾರ್ಚ್​ನಲ್ಲಿ ಕರೊನಾನಿಂದ ಲಾಕ್​ಡೌನ್​ ಶುರುವಾದಾಗಿನಿಂದಲೂ, 'ಬಾಲಿವುಡ್​ ಬಾದ್​ಷಾ' ಶಾರೂಖ್​ ಖಾನ್​ ಒಂದಲ್ಲಾ ಒಂದು ರೀತಿ ಸಹಾಯ ಮಾಡುತ್ತಲೇ ಇದ್ದಾರೆ. ಮೊದಲಿಗೆ ಕೋವಿಡ್​ ಪೇಶಂಟ್​ಗಳ ಚಿಕಿತ್ಸೆಗೆಂದು ಅವರು ತಮ್ಮ ಕಟ್ಟಡವನ್ನು ಬಿಟ್ಟುಕೊಟ್ಟರು. ನಂತರ ಪಿಎಂ ಕೇರ್ಸ್​ ಫಂಡ್​ಗೆ ಅವರು ಹಣಕಾಸಿನ ನೆರವನ್ನೂ ನೀಡಿದ್ದರು.

ಇದೀಗ ಶಾರೂಖ್​ ಖಾನ್​, ಚತ್ತೀಸ್​ಗಡದ ಕರೊನಾ ವಾರಿಯರ್ಸ್​ಗೆ ಎರಡು ಸಾವಿರ ಪರ್ಸನಲ್​ ಪ್ರೊಟೆಕ್ಟಿವ್​ ಎಕ್ವಿಪ್​ಮೆಂಟ್​ (ಪಿಪಿಇ) ಕಿಟ್​ಗಳನ್ನು ಕೊಟ್ಟಿದ್ದಾರೆ. ಈ ಕಿಟ್​ಗಳನ್ನು ಅವರು ತಮ್ಮ ಮೀರ್​ ಫೌಂಡೇಶನ್​ ಎಂಬ ಎನ್​ಜಿಓದಿಂದ ಕೊಟ್ಟಿದ್ದಾರೆ.

ಶಾರೂಖ್​ ಖಾನ್​ ಅವರ ಈ ನಡೆ ನೋಡಿ ಚತ್ತೀಸ್​ಗಡದ ಸಚಿವ ಟಿ.ಎಸ್​. ಸಿಂಗ್​ ಧನ್ಯವಾದಗಳನ್ನು ತಿಳಿಸಿದ್ದಾರೆ. ಕರೊನಾ ವಿರುದ್ಧ ಹೋರಾಡುತ್ತಿರುವ ಸಾವಿರಾರು ವಾರಿಯರ್​ಗಳಿಗೆ ಇದರಿಂದ ಬಹಳ ಅನುಕೂಲವಾಗಲಿದ್ದು, ನಿಮ್ಮ ನಡೆ ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಲಿ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶಾರೂಖ್​, ಇಂತಹ ಕಷ್ಟದ ಸಮಯದಲ್ಲಿ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡುತ್ತಿದ್ದು, ಇದರಿಂದ ಒಂದಿಷ್ಟು ಜನರಿಗೆ ಸಹಾಯವಾಗಲಿ ಎಂದು ಆಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net