ನವರಾತ್ರಿ ಸಂಭ್ರಮ: ವಾದ್ಯ ನುಡಿಸುವುದು ನನ್ನ ಕೆಲಸ ...

Shanvi Srivatsav - Final
Published on

ದಸರಾ ಹಬ್ಬ ಅಂದರೆ ಅದು ದೇವಿಯರ ಹಬ್ಬ. ಒಂಬತ್ತು ದಿನ ದೇವಿಯರ ಪೂಜೆ ಮಾಡುವುದೇ ಈ ಹಬ್ಬದ ವಿಶೇಷತೆ. ನಮ್ಮದು ಮೂಲ ಉತ್ತರ ಭಾರತ ಆಗಿರುವುದರಿಂದ ಈ ಹಬ್ಬದ ಆಚರಣೆ ತುಂಬ ಜೋರು. ಈ ಒಂಬತ್ತು ದಿನ ಒಂದೊಂದು ದೇವಿಯರ ಪಾರಾಯಣ ನಡೆಯುತ್ತದೆ. ಸಂಜೆ ವೇಳೆಗೆ ಭಜನೆ ಇರುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಗುಲ್​ಗುಲಾ ಸಿಹಿ ಖಾದ್ಯ ವಿಶೇಷವಾಗಿರುತ್ತದೆ. ಗಲ್ಲಿಗಲ್ಲಿಗಳಲ್ಲಿ ಪೆಂಡಾಲ್ ಹಾಕಿ ಬೃಹತ್ ದೇವಿಯರ ಮೂರ್ತಿಗಳನ್ನು ಕೂರಿಸಲಾಗುತ್ತದೆ. ಮನೆಯಲ್ಲಿನ ಆಚರಣೆಯ ಉಸ್ತುವಾರಿ ಅಮ್ಮನದ್ದೇ ಆಗಿರುವುದರಿಂದ, ನಾನು ಅವರಿಗೆ ಸಹಾಯ ಮಾಡುತ್ತೇನಷ್ಟೇ. ಪೂಜಾ ಸಮಯದಲ್ಲಿ ಮಂಜಿರಾ ಅನ್ನೋ ವಾದ್ಯವನ್ನು ನುಡಿಸುವುದರ ಜತೆಗೆ ಕೀರ್ತನೆ ಹೇಳುತ್ತೇನೆ. ಅದಾದ ಬಳಿಕ ಒಳ್ಳೇ ಊಟ ಇದ್ದೇ ಇರುತ್ತದೆ. ದಸರಾ ಅಂದ ತಕ್ಷಣ ಮೈಸೂರೂ ನೆನಪಾಗುತ್ತದೆ. ನಾಲ್ಕೈದು ವರ್ಷ ಮೈಸೂರು ದಸರಾ ಕಣ್ತುಂಬಿಕೊಂಡಿದ್ದೇನೆ. ಬೆಳಕಿನಲ್ಲಿಯೇ ಇಡೀ ನಗರ ಕಂಗೊಳಿಸುತ್ತಿರುತ್ತದೆ. ದೇವಸ್ಥಾನಕ್ಕೆ ಹೋಗುವುದು ಇಷ್ಟ. ಆದರೆ, ಈ ಸಲ ಕರೊನಾ ಹಿನ್ನೆಲೆಯಲ್ಲಿ ಎಲ್ಲಿಯೂ ಹೋಗುತ್ತಿಲ್ಲ. ಮನೆಯಲ್ಲಿದ್ದುಕೊಂಡೇ ಆಚರಣೆ ಮಾಡುತ್ತೇನೆ. ಇಡೀ ಕುಟುಂಬ ಮುಂಬೈನಲ್ಲಿಯೇ ಇರುವುದರಿಂದ ಹಬ್ಬದಾಚರಣೆ ಇಲ್ಲಿಯೇ ನಡೆಯಲಿದೆ.

- ಶಾನ್ವಿ ಶ್ರೀವಾತ್ಸವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net