ಈ ಟಿಪ್ಸ್ ಪಾಲಿಸಿದರೆ…ರೇಷ್ಮೆ ಸೀರೆಯನ್ನು ಡ್ರೈ ಕ್ಲೀನಿಂಗ್ ಕೊಡುವ ಅಗತ್ಯವಿಲ್ಲ!

tips to wash silk sarees at home
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ವಿಶೇಷ ಸಮಾರಂಭಗಳಲ್ಲಿ, ಮದುವೆಗಳಲ್ಲಿ ರೇಷ್ಮೆ ಸೀರೆ ತೊಟ್ಟರೆ ಮಹಿಳೆಯರನ್ನು ನೋಡಲು ಎರಡು ಕಣ್ಣು ಸಾಲದು. ತುಂಬಾ ಸುಂದರವಾಗಿ ಕಾಣುತ್ತಾರೆ. ರೇಷ್ಮೆ ಸೀರೆಗಳು ಮಹಿಳೆಯರ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತವೆ ಎನ್ನುವ ಮಾತಿದೆ.

ಒಮ್ಮೆ ಅಥವಾ ಎರಡು ಬಾರಿ ಸೀರೆ ಉಟ್ಟರೆ ಕೊಳಕು ಆಗುತ್ತದೆ. ಸಾಮಾನ್ಯ ಸೀರೆಗಳಂತೆ ರೇಷ್ಮೆ ಸೀರೆಗಳನ್ನು ವಾಶ್​​ ಮಾಡುವಂತಿಲ್ಲ. ಇದನ್ನು ಡ್ರೈ ಕ್ಲೀನಿಂಗ್ ಕೊಡಲು ಸಾಕಷ್ಟು ಹಣ ಖರ್ಚಾಗುತ್ತದೆ. ಕೆಲವು ಸಿಂಪಲ್ ಟಿಪ್ಸ್‌ಗಳೊಂದಿಗೆ ನೀವೇ ಮನೆಯಲ್ಲಿಯೇ ರೇಷ್ಮೆ ಸೀರೆಗಳನ್ನು ಕ್ಲೀನ್ ಮಾಡಬಹುದು. ಆ ಸಲಹೆಗಳನ್ನು ಈಗಲೇ ತಿಳಿದುಕೊಳ್ಳಿ.....

1) ರೇಷ್ಮೆ ಸೀರೆಗಳನ್ನು ತಣ್ಣೀರಿನಿಂದ ಮಾತ್ರ ಸ್ವಚ್ಛಗೊಳಿಸಬೇಕು: ಬಿಸಿ ನೀರು ಬಳಸಿದರೆ ಸೀರೆಯ ಬಣ್ಣ ಮಾಸಬಹುದು. ಸೀರೆಯನ್ನು ಸ್ವಲ್ಪ ಹೊತ್ತು ತಣ್ಣೀರಿನಲ್ಲಿ ನೆನೆಸಿ ನಿಧಾನವಾಗಿ ತೊಳೆಯಿರಿ.

2) ರೇಷ್ಮೆ ಸೀರೆಯನ್ನು ನೀರಿನಲ್ಲಿ ನೆನೆಸಿದ ನಂತರ, ಒಂದು ಬಕೆಟ್‌ನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ 2 ಚಮಚ ಬಿಳಿ ವಿನೆಗರ್ ಅನ್ನು ಮಿಶ್ರಣ ಮಾಡಿ. ಅದರಲ್ಲಿ ರೇಷ್ಮೆ ಸೀರೆಯನ್ನು 10 ನಿಮಿಷ ನೆನೆಸಿಡಿ. ಬಳಿಕ ಶುದ್ಧ ನೀರಿನಿಂದ ತೊಳೆದರೆ ಸೀರೆಯ ಮೇಲಿನ ಕಲೆಗಳು ಮಾಯವಾಗುತ್ತವೆ.

3) ರೇಷ್ಮೆ ಸೀರೆಯನ್ನು ತೊಳೆದ ನಂತರ ಗಟ್ಟಿಯಾಗಿ ಹಿಂಡಬೇಡಿ. ನೀರು ಹರಿದು ಹೋಗುವವರೆಗೆ ಹಾಗೆ ಇಟ್ಟು ನಂತರ ಸೀರೆಯನ್ನು ನೆರಳಿನಲ್ಲಿ ಒಣಗಿಸಿ. ಉರಿ ಬಿಸಿಲಿಗೆ ಹಾಕಿದರೆ ಸೀರೆಯು ತನ್ನ ಹೊಳಪು ಕಳೆದುಕೊಳ್ಳುತ್ತದೆ.

4) ರೇಷ್ಮೆ ಸೀರೆಗಳನ್ನು ಬೇರೆ ಸೀರೆ ಜತೆಗೆ ಸೇರಿಸಿ ಇಡಬೇಡಿ. ಅವುಗಳನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಬೇಕು ಮತ್ತು ಹತ್ತಿ ಬಟ್ಟೆಯಿಂದ ಮುಚ್ಚಬೇಕು. ಈ ಟಿಪ್ಸ್ ಪಾಲಿಸಿದರೆ.. ನಿಮ್ಮ ರೇಷ್ಮೆ ಸೀರೆಗಳು ಎಂದೆಂದಿಗೂ ಹೊಸದಾಗಿ ಸೇಫ್ ಆಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net