Hinduja family : ಬರೋಬ್ಬರಿ 110 ವರ್ಷಗಳ ಇತಿಹಾಸ ಹೊಂದಿರುವ ಬಹುರಾಷ್ಟ್ರೀಯ ಸಂಸ್ಥೆಯಾದ ಹಿಂದೂಜಾ ಗ್ರೂಪ್ನ ಅಧ್ಯಕ್ಷ ಶ್ರೀ ಗೋಪಿಚಂದ್ ಹಿಂದೂಜಾ ನೇತೃತ್ವದ ಹಿಂದೂಜಾ ಕುಟುಂಬವು ಸಂಡೇ ಟೈಮ್ಸ್ನ ಶ್ರೀಮಂತರ ಪಟ್ಟಿಯಲ್ಲಿ £35.3 ಬಿಲಿಯನ್ ಸಂಪತ್ತನ್ನು ಹೊಂದುವ ಮೂಲಕ ಸತತ ನಾಲ್ಕನೇ ವರ್ಷವೂ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.

ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯು ಯುನೈಟೆಡ್ ಕಿಂಗ್ಡಮ್ನಲ್ಲಿ ವಾಸಿಸುವ ಅತ್ಯಂತ ಶ್ರೀಮಂತ ವ್ಯಕ್ತಿಗಳು ಮತ್ತು ಕುಟುಂಬಗಳ ವಾರ್ಷಿಕ ಶ್ರೀಮಂತಿಕೆ ಶ್ರೇಯಾಂಕವಾಗಿದ್ದು, 2025ರ ಆವೃತ್ತಿಯಲ್ಲಿ 350 ಕುಟುಂಬಗಳಿದ್ದವು. ಅವುಗಳಲ್ಲಿ ಹಿಂದೂಜಾ ಕುಟುಂಬ ಅಗ್ರ ಸ್ಥಾನ ಪಡೆದಿದೆ. ಅನೇಕ ಜಾಗತಿಕ ಸಮಸ್ಯೆಗಳು ಮತ್ತು ನೀತಿ ಬದಲಾವಣೆಗಳ ಹೊರತಾಗಿಯೂ ಹಿಂದೂಜಾ ಕುಟುಂಬವು ಅತ್ಯುತ್ತಮ ವ್ಯಾಪಾರ ಸ್ಥಿರತೆ ಸಾಧಿಸಿದೆ ಮತ್ತು ಜಾಗತಿಕ ನಾಯಕತ್ವ ಕಾಯ್ದುಕೊಂಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.
ಯುಕೆ ಮೂಲದ ಈ ಕುಟುಂಬದ ಕಂಪನಿಗಳ ಗ್ರೂಪ್ನ ಚೇರ್ಮನ್ ಆಗಿ ಶ್ರೀ ಜಿ.ಪಿ. ಹಿಂದೂಜಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಗ್ರೂಪ್ನ ಕಂಪನಿಗಳು 38 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ವಾಹನ, ಡಿಜಿಟಲ್ ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ಆರ್ಥಿಕ ಸೇವೆಗಳು, ಮಾಧ್ಯಮ, ಯೋಜನಾ ಅಭಿವೃದ್ಧಿ, ಲೂಬ್ರಿಕೆಂಟ್‌ಗಳು ಮತ್ತು ವಿಶೇಷ ರಾಸಾಯನಿಕಗಳು, ವಿದ್ಯುತ್, ರಿಯಲ್ ಎಸ್ಟೇಟ್, ವ್ಯಾಪಾರ ಮತ್ತು ವೈದ್ಯಕೀಯ ಸೇವೆಗಳಂತಹ ಹಲವಾರು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದೆ.
ಕಳೆದ ಕೆಲವು ವರ್ಷಗಳಲ್ಲಿ ಹಿಂದೂಜಾ ಗ್ರೂಪ್ ಭಾರತದಲ್ಲಿ ವಿದ್ಯುತ್ ವಾಹನ ಕ್ಷೇತ್ರದ ಮೇಲೆ ವಿಶೇಷ ಗಮನ ಹರಿಸಿದೆ. ವಾಹನ ಚಾರ್ಜಿಂಗ್ ಮೂಲಸೌಕರ್ಯದಲ್ಲಿ ಹೂಡಿಕೆ ಸೇರಿದಂತೆ, ಸುಸ್ಥಿರತೆ ಮತ್ತು ಭವಿಷ್ಯಕ್ಕೆ ಸಿದ್ಧವಾದ ಆವಿಷ್ಕಾರಗಳ ಕಡೆಗೆ ಕಾರ್ಯತಂತ್ರದ ಬದಲಾವಣೆಗೆ ಮುಂದಾಗಿದೆ.
ತಮ್ಮ ಉದ್ಯಮ ಸಾಮ್ರಾಜ್ಯದ ಜೊತೆಗೆ ಹಿಂದೂಜಾ ಕುಟುಂಬವು ಹಿಂದೂಜಾ ಫೌಂಡೇಶನ್ ಮೂಲಕ ಸಾಮಾಜಿಕ ಕೆಲಸಗಳನ್ನು ಮಾಡಲು ಬದ್ಧವಾಗಿದೆ. ಈ ಫೌಂಡೇಶನ್ ಶಿಕ್ಷಣ, ಆರೋಗ್ಯ, ಸುಸ್ಥಿರ ಗ್ರಾಮೀಣ ಅಭಿವೃದ್ಧಿ ಮತ್ತು ನೀರಿನ ಸಂರಕ್ಷಣೆಯಲ್ಲಿ ಪರಿವರ್ತಕ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದು, ಇದು ವಿವಿಧ ವಿವಿಧ ಭೌಗೋಳಿಕ ಪ್ರದೇಶಗಳ ಸಮುದಾಯಗಳ ಮೇಲೆ ಪರಿಣಾಮ ಬೀರುವ ಕೆಲಸ ಮಾಡುತ್ತಿದೆ.
2025ರ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತರ ಪ್ರಮುಖ ಹೆಸರುಗಳೆಂದರೆ, ಡೇವಿಡ್ ಮತ್ತು ಸೈಮನ್ ರೂಬೆನ್ ಮತ್ತು ಕುಟುಂಬ (£26.873 ಬಿಲಿಯನ್), ಸರ್ ಲಿಯೊನಾರ್ಡ್ ಬ್ಲಾವತ್ನಿಕ್ (£25.725 ಬಿಲಿಯನ್), ಸರ್ ಜೇಮ್ಸ್ ಡೈಸನ್ ಮತ್ತು ಕುಟುಂಬ (£20.8 ಬಿಲಿಯನ್), ಇಡಾನ್ ಒಫರ್ (£20.121 ಬಿಲಿಯನ್), ಗೈ, ಜಾರ್ಜ್, ಅಲನ್ನಾಹ್ ಮತ್ತು ಗೇಲನ್ ವೆಸ್ಟನ್ ಮತ್ತು ಕುಟುಂಬ (£17.746 ಬಿಲಿಯನ್), ಸರ್ ಜಿಮ್ ರಾಟ್‌ಕ್ಲಿಫ್ (£17.046 ಬಿಲಿಯನ್), ಲಕ್ಷ್ಮಿ ಮಿತ್ತಲ್ ಮತ್ತು ಕುಟುಂಬ (£15.444 ಬಿಲಿಯನ್).
ಪಾಕಿಸ್ತಾನಕ್ಕೆ ಮತ್ತೊಂದು ಶಾಕ್: ಏಷ್ಯಾ ಕಪ್ ಆಡದಿರಲು, ಆಯೋಜಿಸದಿರಲು ಭಾರತ ನಿರ್ಧಾರ! Asia Cup 2025