ಪಾಕಿಸ್ತಾನಕ್ಕೆ ಮತ್ತೊಂದು ಶಾಕ್​: ಏಷ್ಯಾ ಕಪ್​ ಆಡದಿರಲು, ಆಯೋಜಿಸದಿರಲು ಭಾರತ ನಿರ್ಧಾರ! Asia Cup 2025

Asia Cup 2025
blank

Asia Cup 2025 : ಪಾಕಿಸ್ತಾನದ ಜತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ 2025ರ ಏಷ್ಯಾ ಕಪ್ ಅನ್ನು ಆಡದಿರಲು ಅಥವಾ ಆಯೋಜಿಸದಿರಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಪಾಕಿಸ್ತಾನದೊಂದಿಗೆ ಭೌಗೋಳಿಕ ಮತ್ತು ಮಿಲಿಟರಿ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಏಷ್ಯಾ ಕಪ್​ ಅನ್ನು ಈ ವರ್ಷ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಬೇಕಿತ್ತು. ಮೂಲಗಳ ಪ್ರಕಾರ, ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಮಹಿಳಾ ತಂಡಗಳ ಏಷ್ಯಾ ಕಪ್ ಅನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟಿನ ನಡುವೆ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಪುರುಷರ ಏಷ್ಯಾ ಕಪ್‌ ನಡೆಯಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ನೇತೃತ್ವದಲ್ಲಿ ನಡೆಯಲಿರುವ ಮುಂಬರುವ ಎಸಿಸಿ (ಏಷ್ಯನ್ ಕ್ರಿಕೆಟ್ ಕೌನ್ಸಿಲ್) ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆದರೆ, ಭಾರತವು ಈ ಪಂದ್ಯಾವಳಿಯಿಂದ ಹೊರಗುಳಿಯುವ ಅಥವಾ ಆತಿಥ್ಯ ವಹಿಸದಿರಲು ಈಗಾಗಲೇ ಎಸಿಸಿಗೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಒಂದು ವೇಳೆ ಭಾರತದ ಭಾಗವಹಿಸದಿದ್ದರೆ ಈ ಟೂರ್ನಿಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಸಾಧ್ಯತೆಯಿದೆ. ಏಕೆಂದರೆ, ಮೊಹ್ಸಿನ್ ನಖ್ವಿ ಪ್ರಸ್ತುತ ಎಸಿಸಿ ಅಧ್ಯಕ್ಷರಾಗಿರುವುದರಿಂದ, ಎಲ್ಲ ಆರ್ಥಿಕ ನಷ್ಟಗಳನ್ನು ಅವರೇ ಭರಿಸಬೇಕಾಗುತ್ತದೆ. ಹೀಗಾಗಿ, ಏಷ್ಯಾ ಕಪ್​ ನಡೆಯುವುದು ಅನುಮಾನವಾಗಿದೆ.

ಇನ್ನು ಭಾರತ ತೆಗೆದುಕೊಂಡಿರುವ ಈ ಕ್ರಮವು ಪಾಕಿಸ್ತಾನ ಜತೆಗಿನ ಕ್ರಿಕೆಟ್ ಸಂಬಂಧಗಳ ಬಗ್ಗೆ ಭಾರತದ ದೃಷ್ಟಿಕೋನದಲ್ಲಿ ವ್ಯಾಪಕ ಬದಲಾವಣೆಯನ್ನು ಸೂಚಿಸುತ್ತದೆ. ಅಂದರೆ, ಭಾರತ ಮತ್ತು ಪಾಕ್​ ನಡುವಿನ ಪಂದ್ಯಗಳು ಭವಿಷ್ಯದಲ್ಲಿ ನಡೆಯದಿರುವ ಸೂಚನೆಯು ಇದಾಗಿದೆ. ಭಾರತವು ಹಿಂದೇಟು ಹಾಕಿರುವುದು ಈ ವರ್ಷದ ಏಷ್ಯಾಕಪ್‌ನ ಭವಿಷ್ಯವನ್ನು ಗಂಭೀರ ಅನುಮಾನಕ್ಕೆ ದೂಡಿದೆ. 2026ರ ಟಿ20 ವಿಶ್ವಕಪ್‌ಗೆ ಸಿದ್ಧತೆಯಾಗಿ ತಟಸ್ಥ ಸ್ಥಳದಲ್ಲಿ ಟಿ20 ಸ್ವರೂಪದಲ್ಲಿ ಏಷ್ಯಾ ಕಪ್​ ನಡೆಯಬೇಕಿತ್ತು. ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಭಾಗವಹಿಸಲು ನಿರ್ಧರಿಸಲಾಗಿತ್ತು. 2023ರಲ್ಲಿ ಪ್ರಶಸ್ತಿಯನ್ನು ಗೆದ್ದಿರುವ ಭಾರತವು ಏಷ್ಯಾಕಪ್‌ನ ಹಾಲಿ ಚಾಂಪಿಯನ್ ಆಗಿದೆ.

ಇದನ್ನೂ ಓದಿ: ಮೇ 8ರಂದು ಪಾಕ್​ನಿಂದ ಟಾರ್ಗೆಟ್​ ಆಗಿತ್ತು ಗೋಲ್ಡನ್​ ಟೆಂಪಲ್: ಭಾರತೀಯ ಸೇನೆ ರಕ್ಷಿಸಿದ್ಹೇಗೆ? ಇಲ್ಲಿದೆ ರೋಚಕ ಸಂಗತಿ… Golden Temple

ಇನ್ನು ಈ ಪಂದ್ಯಾವಳಿಯ ಆರ್ಥಿಕ ಬೆಂಬಲದ ಬಹುಪಾಲು ಭಾಗವು ಭಾರತೀಯ ಪ್ರಾಯೋಜಕರು ಮತ್ತು ಪ್ರಸಾರಕರಿಂದ ಬರುತ್ತದೆ. ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ (SPNI) 2024ರಲ್ಲಿ ಎಂಟು ವರ್ಷಗಳ ಕಾಲ 170 ಮಿಲಿಯನ್ ಅಮೆರಿಕ ಡಾಲರ್​ಗೆ ಏಷ್ಯಾ ಕಪ್ ಈವೆಂಟ್‌ಗಳ ಮಾಧ್ಯಮ ಹಕ್ಕುಗಳನ್ನು ಪಡೆದುಕೊಂಡಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್‌ಗೆ 19 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಟೂರ್ನಿಯಲ್ಲಿ ಕನಿಷ್ಠ ಎರಡು ಇಂಡೋ-ಪಾಕ್ ಪಂದ್ಯಗಳು ನಡೆಯಬೇಕಿತ್ತು. ಪ್ರತಿಸ್ಪರ್ಧಿಗಳ ನಡುವಿನ ಫೈನಲ್​ ಪಂದ್ಯವನ್ನು ಹೊರತುಪಡಿಸಿ, ಇಂಡೋ-ಪಾಕ್​ ಪಂದ್ಯ ಪ್ರಸಾರಕರಿಗೆ ಹೆಚ್ಚಿನ ಜಾಹೀರಾತು ಆದಾಯವನ್ನು ಖಚಿತಪಡಿಸುತ್ತಿತ್ತು. ಆದರೆ, ಈ ಬಾರಿ ಟೂರ್ನಿ ನಡೆಯುವುದೇ ಅನುಮಾನವಾಗಿದೆ.

ಭಾರತ ಮತ್ತು ಪಾಕ್​ ನಡುವೆ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವುದರಿಂದ ಬಹಳ ಹಿಂದಿನಿಂದಲೂ ಬಹುಪಕ್ಷೀಯ ಪಂದ್ಯಾವಳಿಗಳು ಹೈಬ್ರಿಡ್ ಮಾದರಿಗಳಲ್ಲಿ ನಡೆದುಕೊಂಡು ಬರುತ್ತಿವೆ. 2023ರ ಏಷ್ಯಾ ಕಪ್ ಅನ್ನು ತಾಂತ್ರಿಕವಾಗಿ ಪಾಕಿಸ್ತಾನ ಆಯೋಜಿಸಿತ್ತು. ಆದರೆ, ಭಾರತದ ಪಂದ್ಯಗಳು ಫೈನಲ್ ಸೇರಿದಂತೆ ಸಂಪೂರ್ಣವಾಗಿ ಶ್ರೀಲಂಕಾದಲ್ಲಿ ನಡೆದವು. ಈ ವರ್ಷದ ಆರಂಭದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಅದೇ ಮಾದರಿಯನ್ನು ಅಳವಡಿಸಿಕೊಳ್ಳಲಾಯಿತು. ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವ ಬದಲು ದುಬೈನಲ್ಲಿ ತಮ್ಮ ಪಂದ್ಯಗಳನ್ನು ಆಡಿತು.

ಇದೀಗ ಏಷ್ಯಾ ಕಪ್​ನಿಂದ ಹಿಂದೆ ಸರಿಯುವ ನಿರ್ಧಾರವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿಗಳು ಅಥವಾ ಯಾವುದೇ ರೀತಿಯ ಕ್ರಿಕೆಟ್ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಲು ಭಾರತವು ನಿರಂತರವಾಗಿ ಹಿಂಜರಿಯುತ್ತಿರುವುದನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಭವಿಷ್ಯದಲ್ಲಿ ಇಂಡೋ-ಪಾಕ್​ ಕ್ರಿಕೆಟ್​ ಪಂದ್ಯಗಳು ನಡೆಯದಿದ್ದರು ಅಚ್ಚರಿಪಡಬೇಕಿಲ್ಲ. (ಏಜೆನ್ಸೀಸ್​)

ಆಟವಾಡುತ್ತಿದ್ದಾಗ ಕಾರಿನಲ್ಲಿ ಸಿಲುಕಿ ನಾಲ್ವರು ಮಕ್ಕಳು ದುರಂತ ಸಾವು: ಮುಗಿಲು ಮುಟ್ಟಿದ ಪಾಲಕರ ಆಕ್ರಂದನ! Car Tragedy

IPL ಇತಿಹಾಸದಲ್ಲೇ ಯಾವ ನಾಯಕನಿಂದಲೂ ಸಾಧ್ಯವಾಗದ ವಿಶೇಷ ಸಾಧನೆ ಮಾಡಿದ ಶ್ರೇಯಸ್ ಅಯ್ಯರ್! Shreyas Iyer

Share This Article

ಖಾಲಿ ಹೊಟ್ಟೆಯಲ್ಲಿ ಶುಂಠಿ ತಿನ್ನಿರಿ! ಈ 6 ಆರೋಗ್ಯ ಪ್ರಯೋಜನಗಳು ಪಡೆಯಿರಿ.. | Ginger

Ginger: ಇಂದಿನ ಆಧುನಿಕ ಜಗತ್ತಿನಲ್ಲಿ ವೇಗದ ಜೀವನದಲ್ಲಿ ಮನುಷ್ಯನ ದೇಹ ರೋಗದ ಗೂಡಾಗುತ್ತಿದೆ. ಜಡ ಜೀವನ…

ಸಾಲದ ಹೊರೆಯಿಂದ ಬಳಲುತ್ತಿದ್ರೆ ಶ್ರಾವಣ ಮಾಸದಲ್ಲಿ ಈ ಸಣ್ಣ ಕೆಲಸ ಮಾಡಿ: ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಿರಿ.. | Shravan

Shravan: ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾಗಿದೆ. ಈ ಪವಿತ್ರ ಮಾಸದಲ್ಲಿಯೇ ಶಿವನು ಪಾರ್ವತಿಯನ್ನು ವಿವಾಹವಾಗದ್ದು ಎಂದು…