TT ಟೈರ್​ ಬ್ಲಾಸ್ಟ್ ಆಗಿ ಸರಣಿ ಅಪಘಾತ; ಮೂವರು ಸಾವು, ಏಳು ಜನರಿಗೆ ಗಾಯ

Kalaburagi Accident
Published on

ಕಲಬುರಗಿ: ಟೆಂಪೋ ಟ್ರಾವಲರ್​ (TT) ಟೈರ್ ಸ್ಫೋಟಗೊಂಡ ಪರಿಣಾಮ ಸರಣಿ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಗೊಬ್ಬೂರ್ ಬಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಮೃತರನ್ನು ವಿನುತಾ ಕಲಬುರಗಿ (54) ಅನೂಪ್ ಮಾಧವ್ (29) ಹಾಗೂ ಬಸವರಾಜ್​ (33) ಎಂದು ಗುರುತಿಸಲಾಗಿದ್ದು, ಟಿಟಿ (TT), ಕಬ್ಬಿನ ಲಾರಿ ಹಾಗೂ ಬೈಕಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಈ ಮೂವರು ಮೃತಪಟ್ಟಿದ್ದಾರೆ.

ಮೃತ ವಿನುತಾ ಹಾಗೂ ಅನೂಪ್ ಮಾಧವ್ ಕಲಬುರಗಿಯ ಸ್ಟೇಷನ್ ಬಜಾರ್ ನಿವಾಸಿಗಳು ಎಂದು ತಿಳಿದು ಬಂದಿದ್ದು, ಬೈಕ್ ಸವಾರ ಬಸವರಾಜ್ ಗೊಬ್ಬೂರ್ ಬಿ ಗ್ರಾಮದ ನಿವಾಸಿ ಎಂದು ವರದಿಯಾಗಿದೆ. ಟಿಟಿಯಲ್ಲಿದ್ದ (TT) ಏಳು ಮಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Kalaburagi Accident

ಘಟನೆ ಕುರಿತು ಮಾಹಿತಿ ನೀಡಿರುವ ಪೊಲೀಸ್​ ಅಧಿಕಾರಿಯೊಬ್ಬರು, ಗಾಣಗಾಪುರದ ದತ್ತನ ದರ್ಶನ ಮುಗಿಸಿಕೊಂಡು ಕಲಬುರಗಿಗೆ ಬರುತ್ತಿದ್ದ ಟಿಟಿ (TT) ವಾಹನದ ಟೈರ್ ಸ್ಫೋಟಗೊಂಡ ಪರಿಣಾಮ ಅಪಘಾತ ಸಂಭವಿಸಿದ್ದು, ಟಿಟಿಯಲ್ಲಿದ್ದ ವಿನುತಾ, ಅನೂಪ್​ ಹಾಗೂ ಬೈಕ್​ ಸವಾರ ಬಸವರಾಜ್​ ಮೃತಪಟ್ಟಿದ್ದಾರೆ.

ಟಿಟಿಯಲ್ಲಿದ್ದ (TT) ಏಳು ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೇದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಕಲಬುರಗಿ ಎಸ್ ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net