Location ಬದಲಿಗೆ ಆಮ್ಲೆಟ್​​​ ಮಾಡುವ ವಿಡಿಯೋ ನೋಡಿ Cab ಚಲಾಯಿಸಿದ Driver: ವೈರಲ್​ ವಿಡಿಯೋಗೆ ಪೊಲೀಸರ ರಿಯಾಕ್ಷನ್​ ಹೀಗಿದೆ

Ola Cab Driver
Published on

ಮುಂಬೈ: ಜನನಿಬಿಡ ರಸ್ತೆಯಲ್ಲಿ ಓಲಾ ಕ್ಯಾಬ್​ ಚಾಲಕನೋರ್ವ (Ola Cab Driver) ಆಮ್ಲೆಟ್​ (Omelette) ಮಾಡುತ್ತಿರುವ ವಿಡಿಯೋವನ್ನು ನೋಡಿಕೊಂಡು ವಾಹನ ಚಲಾಯಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಚಾಲಕನ ನಡೆ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಡ್ರೈವಿಂಗ್ ಮಾಡುವಾದ ಓಲಾ ಚಾಲಕನೋರ್ವ ತನ್ನ ಮೊಬೈಲ್​ನಲ್ಲಿ ಲೊಕೇಷನ್​ನ ಬದಲಾಗಿ ಯೂಟ್ಯೂಬ್​ನಲ್ಲಿ ಆಮ್ಲೆಟ್​ ಮಾಡುತ್ತಿರುವ ವಿಡಿಯೋವನ್ನು ನೋಡಿಕೊಂಡು ಚಲಾಯಿಸುತ್ತಿರುವುದನ್ನು ನೋಡಬಹುದಾಗಿದೆ. ತನ್ನ ವಾಹನದಲ್ಲಿದ್ದ ಪ್ಯಾಸೆಂಜರ್​ ಇದರ ವಿಡಿಯೋವನ್ನು ಮಾಡುತ್ತಿದ್ದಾರೆ ಎಂದು ಅರಿಯದ ಚಾಲಕ ತನ್ನ ಪಾಡಿಗೆ ತಾನು ವಿಡಿಯೋ ನೋಡಿಕೊಂಡು ಕಾರು ಚಲಾಯಿಸುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಇತ್ತ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಪೊಲೀಸರು ಮಾಹಿತಿಯನ್ನು ಹಂಚಿಕೊಳ್ಳುವಂತೆ ಸವಾರನಿಗೆ ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಚಾಲಕನ ಅಜಾಗರೂಕತೆಗೆ ಕಿಡಿಕಾರಿದ್ದಾರೆ. ಇದಲ್ಲದೆ ಓಲಾ ಸಂಸ್ಥೆಯ ಸ್ಕೂಟರ್​ಗಳ ವಿರುದ್ಧವೂ ನೆಟ್ಟಿಗರು ವಾಗ್ದಾಳಿ ನಡೆಸಿದ್ದು, ಚಾಲಕನ ನಡೆಯನ್ನು ಖಂಡಿಸಿ ಸಂಸ್ಥೆಯ ವಿರುದ್ಧ ಹೌಹಾರಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದ್ದು, ಮುಂದಿನ ದಿನಗಳಲ್ಲಿ ಪೊಲೀಸರು ಯಾವ ಕ್ರಮ ಜರುಗಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net