More

    3 ಫ್ಲಾಪ್ ಆದರೇನು? 6 ಬ್ಲಾಕ್​ಬಸ್ಟರ್ ಕೊಟ್ಟಿಲ್ಲವಾ?

    ಬಾಲಿವುಡ್ ಸುಂದರಿ ಪೂಜಾ ಹೆಗ್ಡೆ ಈ ವರ್ಷ ನಟಿಸಿರುವ ಮೂರು ಬಿಗ್ ಬಜೆಟ್ ಸಿನಿಮಾಗಳು ಬಾಕ್ಸಾಫೀಸಲ್ಲಿ ಮಕಾಡೆ ಮಲಗಿವೆ. ಆದರೆ, ಪೂಜಾ ಹ್ಯಾಟ್ರಿಕ್ ಸೋಲಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈ ಕುರಿತು ಇತ್ತೀಚೆಗೆ ಮಾತನಾಡಿರುವ ಅವರು, ‘ಮೂರು ಸಿನಿಮಾಗಳು ಸೋತಿರಬಹುದು. ಆದರೆ ಅದಕ್ಕೂ ಮುನ್ನ ನಾನು ನಟಿಸಿದ್ದ ಆರು ಚಿತ್ರಗಳು ಬ್ಲಾಕ್​ಬಸ್ಟರ್ ಆಗಿದ್ದವು.

    ಹಾಗೇನಾದರೂ ನಾನು ಈ ಹಿಟ್ ಸಿನಿಮಾಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ, ಈಗ ಫ್ಲಾಪ್​ಗಳ ಬಗ್ಗೆಯೂ ಅಷ್ಟೇ ಗಂಭೀರವಾಗಬೇಕಿತ್ತು. ‘ರಾಧೇಶ್ಯಾಮ್, ‘ಆಚಾರ್ಯ’ ಮತ್ತು ‘ಬೀಸ್ಟ್’ ಚಿತ್ರಗಳಲ್ಲಿ ನನ್ನ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿದ್ದರು. ಕೊನೆಗೆ ನಾವು ಎಂಟರ್​ಟೈನರ್​ಗಳಷ್ಟೇ. ಜನರ ಮುಖದಲ್ಲಿ ಖುಷಿ ಮೂಡಿಸುವುದು ಮಾತ್ರ ನಮ್ಮ ಕೆಲಸ’ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.

    ಬಟ್ಟೆ, ಮೇಕಪ್ ಕಿಟ್ ಮಾಯ!: ಇನ್ನು, ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಪೂಜಾ, ರೆಡ್ ಕಾರ್ಪೆಟ್ ಮೇಲೆ ತರಹೇವಾರಿ ಉಡುಗೆಯಲ್ಲಿ ಕ್ಯಾಟ್ ವಾಕ್ ಮಾಡಿ ಮಿಂಚಿದ್ದಾರೆ. ಆದರೆ, ತಡವಾಗಿ ಗೊತ್ತಾಗಿರುವ ವಿಷಯವೇನೆಂದರೆ, ಒಂದು ಸಣ್ಣ ಗೊಂದಲದಿಂದಾಗಿ ಪೂಜಾ ಅವರ ಲಗೇಜ್ ಫ್ರಾನ್ಸ್ ತಲುಪಿಯೇ ಇಲ್ಲ. ಅವರ ಡ್ರೆಸ್ ಮತ್ತು ಮೇಕಪ್ ಇದ್ದ ಎಲ್ಲ ಸೂಟ್​ಕೇಸ್ ಭಾರತದಲ್ಲೇ ಉಳಿದು ಹೋಗಿದೆ. ‘ಆದರೆ ನಾನೇ ಎಲ್ಲರನ್ನೂ ಸಮಾಧಾನಪಡಿಸಿ, ಬೇಗ ಹೋಟೆಲ್​ಗೆ ಹೋಗಿ ಹೊಸ ಬಟ್ಟೆಗಳನ್ನು ಸ್ಟಿಚ್ ಮಾಡಿಸಿಕೊ ಳ್ಳೋಣ ಎಂದೆ. ಈ ಟೆನ್ಶನ್​ನಿಂದ ತಿಂಡಿ ಊಟವನ್ನೂ ಯಾರೂ ಮಾಡಿರ ಲಿಲ್ಲ. ಆದರೆ, ಯಾವುದೇ ಸಮಸ್ಯೆ ಆಗಲಿಲ್ಲ’ ಎನ್ನುತ್ತಾರೆ ಪೂಜಾ.

    ಶಾಸಕ ಜಮೀರ್​ ಅಹಮದ್​ರಿಂದ ಎಂಜಲು ಸೇವನೆ; ತಿನ್ನಲು ಕಾರಣವಿದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts