ಶಾಸಕ ಜಮೀರ್​ ಅಹಮದ್​ರಿಂದ ಎಂಜಲು ಸೇವನೆ; ತಿನ್ನಲು ಕಾರಣವಿದು..

1279992
Published on

ಬೆಂಗಳೂರು: ಇತ್ತೀಚೆಗೆ ಆಗಾಗ ಏನಾದರೊಂದು ಕಾರಣಕ್ಕೆ ಸುದ್ದಿಯಾಗಿ ಗಮನ ಸೆಳೆಯುತ್ತಿರುವ ಶಾಸಕ ಜಮೀರ್ ಅಹಮದ್ ಖಾನ್ ಇದೀಗ ಮತ್ತೊಂದು ಕಾರಣಕ್ಕೆ ಜನರು ತಮ್ಮ ಕುರಿತು ಮಾತನಾಡುವಂತೆ ಮಾಡಿದ್ದಾರೆ. ಅಷ್ಟಕ್ಕೂ ಅವರು ಈ ಸಲ ಗಮನ ಸೆಳೆಯಲು ಕಾರಣ ಎಂಜಲು ತಿಂದಿದ್ದು.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್ ಕಾರ್ಯಕ್ರಮವೊಂದರಲ್ಲಿ ದಲಿತ ಸ್ವಾಮೀಜಿಯೊಬ್ಬರ ಎಂಜಲನ್ನು ತಿಂದಿದ್ದಾರೆ. ಈ ಕುರಿತು ವಿಡಿಯೋ ವೈರಲ್ ಆಗಿದ್ದು, ಅವರು ತಾವು ಎಂಜಲು ಸೇವಿಸಿದ್ದು ಯಾಕೆ ಎಂಬುದನ್ನು ಸಮರ್ಥಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ಅಡುಗೆಯವ ದಲಿತ ಎಂಬ ಕಾರಣಕ್ಕೆ ಅಲ್ಲಿನ ಮಕ್ಕಳಲ್ಲಿ ಜಾತಿಭೇದ ಬಿತ್ತಲಾಗಿದ್ದು, ಆ ಮಕ್ಕಳು ಪ್ರತಿಭಟನೆ ಮಾಡಿ ಆ ಊಟವನ್ನು ತಿರಸ್ಕರಿಸಿದ್ದರು. ಮಾಧ್ಯಮದಲ್ಲಿ ಈ ವಿಚಾರ ಬಿತ್ತರವಾಗಿದ್ದನ್ನು ನೋಡಿದ್ದೆ. ಅದನ್ನು ನೋಡಿ ನನಗೆ ತುಂಬ ಬೇಸರವಾಯಿತು. ಹೀಗಾಗಿ ಇಂದು ದಲಿತ ಸ್ವಾಮೀಜಿ ನಾಗರಾಜ ಅವರಿಗೆ ಒಂದು ತುತ್ತು ತಿನ್ನಿಸಿ, ಬಳಿಕ ಅದನ್ನೇ ಅವರಿಂದ ನನಗೆ ತಿನ್ನಿಸಲು ಹೇಳಿದ್ದೇನೆ ಎಂದು ಜಮೀರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net