ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಸ್ಟಾರ್ ನಟ, ಹಿರಿಯ ಕಲಾವಿದ ನಂದಮೂರಿ ಬಾಲಕೃಷ್ಣ ಅಲಿಯಸ್ ಬಾಲಯ್ಯ ಸದ್ಯ ತಾವು ಯಾವ ಸ್ಟಾರ್ ಯುವ ನಟನಿಗೂ ಕಡಿಮೆ ಇಲ್ಲ ಎಂಬುದನ್ನು ತಮ್ಮ ಇತ್ತೀಚಿನ ಸಿನಿಮಾಗಳ ಮೂಲಕ ತೋರಿಸುತ್ತಿದ್ದಾರೆ. ಇದೊಂದು ರೀತಿ ಹಲವು ನಟರಿಗೆ ಸವಾಲಾಗಿದ್ದೇ ಆದರೂ ಚಿತ್ರರಂಗಕ್ಕೆ ನಷ್ಟ ಅಂತು ಇಲ್ಲ ಎಂಬುದನ್ನು ಅರಿತುಕೊಂಡಿದ್ದಾರೆ. ಇದೀಗ ತಮ್ಮ ಮುಂಬರುವ ‘ಬಾಬಿ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ಬಾಲಯ್ಯ, ಹೈದರಾಬಾದ್ ಶೂಟಿಂಗ್ ಸೆಟ್ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಘರ್ಜನೆ: ಸಮೀಸ್ಗೆ ಲಗ್ಗೆ, ಪದಕಕ್ಕೆ ಇನ್ನೊಂದೇ ಹೆಜ್ಜೆ
ಈ ಮಧ್ಯೆ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಬಾಲಯ್ಯ ನಟನೆಯ ‘ಬಾಬಿ’ ಚಿತ್ರದಲ್ಲಿ ಬರೋಬ್ಬರಿ ಮೂವರು ಹೀರೋಯಿನ್ಗಳು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಬಾಲಿವುಡ್ ಸ್ಟಾರ್ ನಟಿ ಊರ್ವಶಿ ರೌಟೇಲಾ, ಪ್ರಗ್ಯಾ ಜೈಸ್ವಾಲ್ ಮತ್ತು ಶ್ರದ್ಧಾ ಶ್ರೀನಾಥ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಈ ಹಿಂದೆ ‘ಅಖಂಡ’ ಸಿನಿಮಾದಲ್ಲಿ ಬಾಲಕೃಷ್ಣ ಜತೆ ತೆರೆ ಹಂಚಿಕೊಂಡಿದ್ದ ಪ್ರಗ್ಯಾ, ಇದೀಗ ಎರಡನೇ ಬಾರಿಗೆ ಅವರೊಂದಿಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
‘ಬಾಬಿ’ ಚಿತ್ರದಲ್ಲಿ ದ್ವಿಪಾತ್ರ ನಿರ್ವಹಿಸುತ್ತಿರುವ ಬಾಲಯ್ಯಗೆ ಮೂವರು ನಾಯಕಿಯರು ಎಂಬ ಸುದ್ದಿ ಸದ್ಯ ನಟನ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಸಿತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ನಡಿ ಮೂಡಿಬರಲಿರುವ ಈ ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಎಂಬ ಮಾಹಿತಿಯನ್ನು ಶೀಘ್ರವೇ ಚಿತ್ರತಂಡ ಬಹಿರಂಗಪಡಿಸಲಿದೆ,(ಏಜೆನ್ಸೀಸ್).
ಇನ್ಯಾವತ್ತು ನಮ್ಮ ತಾಯಿ ಅಲ್ಲಿಗೆ ಕಾಲಿಡಲ್ಲ! ಬಾಂಗ್ಲಾ ಜನರಿಗೆ ಖಡಕ್ ತಿರುಗೇಟು ಕೊಟ್ಟ ಹಸೀನಾ ಪುತ್ರ
ಪ್ಯಾರಿಸ್ ಒಲಿಂಪಿಕ್ಸ್ 2024: 89.34 ಮೀ. ಜಾವಲಿನ್ ಎಸೆದು ಫೈನಲ್ ಪ್ರವೇಶಿಸಿದ ‘ಚಿನ್ನದ ಹುಡುಗ’