ಪ್ಯಾರಿಸ್​ ಒಲಿಂಪಿಕ್ಸ್​ 2024: 89.34 ಮೀ. ಜಾವಲಿನ್​ ಎಸೆದು ಫೈನಲ್ ಪ್ರವೇಶಿಸಿದ 'ಚಿನ್ನದ ಹುಡುಗ'

ವಿಜಯವಾಣಿ - 2024-08-06T155044.462
Published on

ಪ್ಯಾರಿಸ್​: ಇಂದು (ಆ.06) ನಡೆದ ಜಾವಲಿನ್​ ಸ್ಪರ್ಧೆಯಲ್ಲಿ ಭಾರತದ ಚಿನ್ನದ ಹುಡುಗ, ಚಾಂಪಿಯನ್ ನೀರಜ್ ಚೋಪ್ರಾ ಭಾಗವಹಿಸಿದ್ದು, ಇದೀಗ ತಮ್ಮ ಮೊದಲ ಪ್ರಯತ್ನದಲ್ಲೇ 89.34 ಮೀ. ಜಾವಲಿನ್ ಎಸೆದು ನೇರ ಫೈನಲ್​ ಪ್ರವೇಶಿಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಕಳೆದ ಬಾರಿ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದ್ದ ನೀರಜ್​, ಈ ಬಾರಿಯ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಫೈನಲ್ ಪ್ರವೇಶಿಸಿರುವುದು ಭಾರತೀಯರಿಗೆ ಭಾರೀ ಸಂತಸ ಉಂಟುಮಾಡಿದೆ. 2024ರ ಒಲಿಂಪಿಕ್​ ಓಟದಲ್ಲಿಯೂ ಚಿನ್ನ ಗೆದ್ದು ತರುವೆ ಎಂಬ ಭರವಸೆ ನೀಡಿರುವ ನೀರಜ್​ಗೆ ಇದೀಗ ದೇಶವ್ಯಾಪಿ ಅಭಿನಂದನೆಗಳು ಹಾಗೂ ಶುಭಹಾರೈಕೆಗಳು ವ್ಯಕ್ತವಾಗುತ್ತಿವೆ.

ಪುರುಷರ ಜಾವಲಿನ್​ ಸ್ಪರ್ಧೆಯಲ್ಲಿ ಭಾಗವಹಿಸಿದ ನೀರಜ್​, ತಮ್ಮ ಮೊದಲನೇ ಪ್ರಯತ್ನದಲ್ಲಿಯೇ 89.34 ಮೀ. ಎಸೆದು ನೇರವಾಗಿ ಫೈನಲ್ ಪ್ರವೇಶಿಸಿರುವುದು ಭಾರತೀಯರಿಗೆ ಐತಿಹಾಸಿಕ ಕ್ಷಣವಾಗಿದೆ. ಆಗಸ್ಟ್​ 08ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕಕ್ಕೆ ಗುರಿಯಿಡಲಿರುವ ನೀರಜ್, ಖಂಡಿತವಾಗಿ ಚಿನ್ನ ಗೆದ್ದು ಬರಲಿದ್ದಾರೆ ಎಂದು ಭಾರತೀಯರು ಆಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net