ಪ್ರತಿದಿನ ವಾಕಿಂಗ್​ ಮಾಡುವವರು 6-6-6 ವಿಧದ ನಡಿಗೆಯ ಬಗ್ಗೆ ತಿಳಿದಿರಲೇಬೇಕು! ಉಪಯುಕ್ತ ಮಾಹಿತಿ ಇಲ್ಲಿದೆ... Walking

Walking
Published on

Walking : ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ವಾಕಿಂಗ್ ಮಾಡುವ ಅಭ್ಯಾಸ ಇರುವವರು 6-6-6 ವಿಧದ ವಾಕಿಂಗ್ ಬಗ್ಗೆ ಖಂಡಿತವಾಗಿ ತಿಳಿದಿರಬೇಕು. ವಾಕಿಂಗ್ ಮಾಡುವ ಅಭ್ಯಾಸ ಇಲ್ಲದವರು ಮತ್ತು ಮಾಡುವ ಬಯಕೆ ಇರುವವರು ಕೂಡ ಇದರತ್ತ ಗಮನ ಹರಿಸಿದರೆ ಉತ್ತಮ. ಅಷ್ಟಕ್ಕೂ ಈ 6-6-6 ಪ್ರಕಾರ ಯಾವುದು ಅಂತ ತಿಳಿಯೋಣ.

ಪ್ರತಿದಿನ ಬೆಳಗ್ಗೆ 6 ಅಥವಾ ಸಂಜೆ 6 ಗಂಟೆಗೆ 60 ನಿಮಿಷಗಳ ಕಾಲ ನಡೆಯಿರಿ. ಮುಖ್ಯವಾದ ವಿಚಾರ ಏನೆಂದರೆ, ನಡಿಗೆಯನ್ನು ಪ್ರಾರಂಭಿಸುವ ಮೊದಲು 6 ನಿಮಿಷಗಳ ವಾರ್ಮಪ್​ ವ್ಯಾಯಾಮಗಳನ್ನು ಮಾಡಿ ಮತ್ತು ವಾಕಿಂಗ್​ ಮುಗಿಸಿದ ನಂತರ ಇನ್ನೊಂದು 6 ನಿಮಿಷಗಳ ನಂತರವೂ ಕೂಲ್​ ಡೌನ್​ ವ್ಯಾಯಾಮಗಳನ್ನು ಮಾಡಿ. ಈ ಸಂಪೂರ್ಣ ಪ್ರಕ್ರಿಯೆಯನ್ನು 6-6-6 ವಾಕಿಂಗ್ ಎಂದು ಕರೆಯಲಾಗುತ್ತದೆ.

ಈ ರೀತಿಯ ನಡಿಗೆಯ ಪ್ರಯೋಜನಗಳೇನು?

ಪ್ರತಿದಿನ 60 ನಿಮಿಷಗಳ ಕಾಲ ನಡೆಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಅಲ್ಲದೆ, ದೇಹದ ತೂಕವನ್ನೂ ನಿಯಂತ್ರಣದಲ್ಲಿಡುತ್ತದೆ. ಒಟ್ಟಾರೆ ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ಬೆಳಗ್ಗೆ ಬೇಗನೆ ಎದ್ದೇಳಲು ಸಾಧ್ಯವಾಗದವರು ಸಂಜೆ ವಾಕಿಂಗ್​ ಮಾಡುತ್ತಾರೆ. ತಜ್ಞರ ಪ್ರಕಾರ, ಸಂಜೆಯ ವೇಳೆ ವಾಕಿಂಗ್ ಮಾಡುವುದರಿಂದ ಉತ್ತಮ ನಿದ್ದೆ ಬರುತ್ತದೆ. ಇದಲ್ಲದೆ, ದೇಹದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣದಲ್ಲಿರುತ್ತದೆ. ನಿರ್ದಿಷ್ಟವಾಗಿ, ಜೀರ್ಣಕ್ರಿಯೆಯು ಸುಧಾರಿಸುತ್ತದೆ.

ಬೆಳಗಿನ ನಡಿಗೆಯ ಪ್ರಯೋಜನಗಳು

ಬೆಳಗ್ಗೆ 6 ಗಂಟೆಗೆ ನಡೆಯುವುದರಿಂದ ಚಯಾಪಚಯವು ಸುಧಾರಿಸುತ್ತದೆ. ಈ ಸಮಯದಲ್ಲಿ ದೇಹದಲ್ಲಿನ ಕ್ಯಾಲೊರಿಗಳನ್ನು ಚೆನ್ನಾಗಿ ಕರಗಿಸಬಹುದು. ಅನಗತ್ಯ ಒತ್ತಡ ಮತ್ತು ಆತಂಕ ಕಡಿಮೆಯಾಗಿ ಮಾನಸಿಕವಾಗಿ ಆರೋಗ್ಯವಾಗಿರಬಹುದು.

ವಾಕಿಂಗ್ ಪ್ರಾರಂಭಿಸುವ ಮೊದಲು 6 ನಿಮಿಷಗಳ ಕಾಲ ವಾರ್ಮಪ್​ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದ ಸ್ನಾಯುಗಳಿಗೆ ರಕ್ತದ ಹರಿವು ಹೆಚ್ಚಾಗಿ, ವ್ಯಾಯಾಮವನ್ನು ಸುಲಭಗೊಳಿಸುತ್ತದೆ. ಅದೇ ರೀತಿ ವ್ಯಾಯಾಮದ ನಂತರ ದಣಿದ ದೇಹವನ್ನು ಶಾಂತಗೊಳಿಸಲು, ನಿಮ್ಮ ದೇಹದ ಉಷ್ಣತೆಯನ್ನು ಸ್ಥಿರಗೊಳಿಸಲು ನೀವು ಕೂಲ್-ಡೌನ್ ವ್ಯಾಯಾಮವನ್ನು ಮಾಡಬೇಕು.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net