ಯುವ ಪೀಳಿಗೆಗೆ ಕೃಷಿ ಮಾಹಿತಿ ನೀಡಿ : ಸುಚರಿತ ಶೆಟ್ಟಿ ಹೇಳಿಕೆ

New Project (36)
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಯುವ ಪೀಳಿಗೆಗೆ ಕೃಷಿ, ಹೈನುಗಾರಿಕೆ ಬಗ್ಗೆ ಆಸಕ್ತಿ ಹಾಗೂ ಸೂಕ್ತ ಮಾಹಿತಿ ನೀಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ದ.ಕ. ಹಾಲು ಉತ್ಪಾದಕರ ಸಹಕಾರಿ ಸಂಘದ ವ್ಯವಸ್ಥಾಪಕ ನಿರ್ದೇಶಕ ಸುಚರಿತ ಶೆಟ್ಟಿ ಹೇಳಿದರು.

ತೋಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಸಕ ಉಮಾನಾಥ ಕೋಟ್ಯಾನ್ ಶಾಖೆಗೆ ಭೇಟಿ ನೀಡಿ, ಗ್ರಾಮದ ಅಭಿವೃದ್ಧಿಗೆ ಮೂಲವಾದ ಹೈನುಗಾರಿಕೆಯ ಶ್ರೇಯೋಭಿವೃದ್ಧಿಗಾಗಿ ಮೂಲಸೌಕರ್ಯ ನಿರ್ಮಾಣ, ಕಟ್ಟಡಕ್ಕೆ ಅನುದಾನ ಲಭ್ಯವಾಗುವಂತೆ ಮಾಡಲಾಗುವುದು ಎಂದರು.

ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕಟ್ಟಡದ ಉದ್ಘಾಟನೆ ನೆರವೇರಿಸಿದರು. ಸಂಘದ ಅಧ್ಯಕ್ಷ ಲತಾ ಡಿ.ಭಟ್ ಅಧ್ಯಕ್ಷತೆ ವಹಿಸಿದ್ದರು.

ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸುಧಾಕರ್ ರೈ, ವ್ಯವಸ್ಥಾಪಕ ರವಿರಾಜ್ ಉಡುಪ, ವ್ಯವಸ್ಥಾಪಕ ನಿರ್ದೇಶಕಿ ಸವಿತಾ ಶೆಟ್ಟಿ, ನಂದರಾಮ್, ಗುರುಪ್ರಸಾದ್, ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷ ಗುರುರಾಜ್ ಎಸ್ ಪೂಜಾರಿ, ಪಂಚಾಯಿತಿ ಉಪಾಧ್ಯಕ್ಷ ಹೇಮನಾಥ ಅಮೀನ್, ಪುನರೂರು ಪ್ರತಿಷ್ಠಾನದ ದೇವಪ್ರಸಾದ್ ಪುನರೂರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯಾಧಿಕಾರಿ ನಿಶ್ಮಿತಾ, ಒಕ್ಕೂಟದ ಉಪ ವ್ಯವಸ್ಥಾಪಕ ಚಂದ್ರಶೇಖರ್ ಭಟ್, ವಿಸ್ತರಣಾಧಿಕಾರಿ ಸಂದೀಪ್, ಗ್ರಾಮದ ಗಣ್ಯರಾದ ಪದ್ಮನಾಭ್ ಆಚಾರ್ಯ, ವ್ಯವಸ್ಥಾಪನಾ ಸದಸ್ಯರಾದ ತೋಕೂರುಗುತ್ತು ಸಂಪತ್ ಶೆಟ್ಟಿ, ಸವಿತಾ ಬೆಳ್ಳಾಯರು, ಕುಸುಮ ಹರೀಶ್, ಪಂಜ ನವೀನ್ ಶೆಟ್ಟಿ, ಪ್ರಮೀಳಾ ಡಿ.ಶೆಟ್ಟಿ, ತೋಕೂರು ಯುವಕ ಸಂಘ ಅಧ್ಯಕ್ಷ ರಮೇಶ್ ದೇವಾಡಿಗ, ಮುಖ್ಯ ನಿರ್ವಹಣಾಧಿಕಾರಿ ಪದ್ಮಪ್ರಿಯಾ, ಗೀತ ಸದಾನಂದ್, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net