ಗಾಳಿಬೀಡಿನಲ್ಲಿ ಮರ ಅಕ್ರಮ ಸಾಗಾಟ : ವಾಹನ ಸಹಿತ ಮರದ ದಿಮ್ಮಿಗಳು ವಶಕ್ಕೆ

New Project (35)
Published on

ಕಡಬ: ಕೋಡಿಂಬಾಳ ಗ್ರಾಮದ ಗಾಳಿಬೀಡು ಸಮೀಪ ಅಕ್ರಮ ಮರ ಸಾಗಾಟದ ಜಾಲವನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿ ಹಲವು ಸೊತ್ತುಗಳನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ. ಅರಣ್ಯಾಧಿಕಾರಿ ಸಂಧ್ಯಾ ನೇತೃತ್ವದಲ್ಲಿ ದಾಳಿ ಸಂದರ್ಭ ಹಲವು ಮಂದಿ ಪರಾರಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ, ಮೊಬೈಲ್ ಕ್ರೇನ್, ಮಹಾಗನಿ ಮರದ 22 ದಿಮ್ಮಿಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕ ಕಾಸರಗೋಡು ಜಿಲ್ಲೆಯ ಪರಪ್ಪ ನಿವಾಸಿ ಲತೀಫ್ ಎಂಬಾತ ಆರೋಪಿ ಎನ್ನಲಾಗಿದ್ದು, ಮರ ಮಾರಾಟ ಮಾಡಿದವರು, ಮರ ಪಡೆದುಕೊಂಡವರು, ದಲ್ಲಾಳಿಗಳ ವಿವರಗಳನ್ನು ಅರಣ್ಯಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net