ಮೆದುಳನ್ನು ಚುರುಕಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕೆ.. ಈ 5 ಹುರಿದ ಪದಾರ್ಥ ತಿನ್ನಲು ಇಂದಿನಿಂದಲೇ ಆರಂಭಿಸಿ

Untitled-design-2024-08-16T191830.833-1
Published on

ಪ್ರಸ್ತುತ ಒತ್ತಡ ಜೀವನಶೈಲಿಯಿಂದ ದೈಹಿಕ ಮತ್ತು ಮಾನಸಿಕ ದೌರ್ಬಲ್ಯದ ಸಮಸ್ಯೆಗಳು ಉದ್ಭವಾಗುತ್ತದೆ. ನಿಮ್ಮ ಜೀವನಶೈಲಿಯು ನಿಮಗೆ ತಿಳಿಯದಂತೆ ಮೆದುಳಿನ ಮೇಲೆ ನಕಾರತ್ಮಕ ಪರಿಣಾಮ ಬಿರುತ್ತದೆ. ಇದರಿಂದಾಗಿ ಆಕ್ಸಿಡೇಟಿವ್ ಸ್ಟ್ರೆಸ್, ಟಾಕ್ಸಿನ್, ಪೌಷ್ಟಿಕಾಂಶದ ಕೊರತೆ, ನಿದ್ರಾಹೀನತೆ ಉಂಟಾಗುತ್ತದೆ. ಅಲ್ಲದೆ ಇದರಿಂದ ಮೆದುಳಿಗೆ ಮಂಕು ಕವಿದ ರೀತಿ ಅನುಭವ ಉಂಟಾಗುತ್ತದೆ. ಇದರಿಂದ ಖಿನ್ನತೆ, ಹಾರ್ಮೋನ್​ಗಳಲ್ಲಿ ವ್ಯತ್ಯಾಸ ಹೀಗೆ ಹಲವು ಸಮಸ್ಯೆ ಎದುರಾಗುತ್ತದೆ. ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಮ್ಮನ್ನು ಮಾನಿಟರ್​ ಮಾಡುವುದೆ ನಮ್ಮ ಮೆದುಳು. ನಮ್ಮ ಮೆದುಳು ಚುರುಕಾಗಿ ಕೆಲಸ ಮಾಡಲು ಈ 5 ಪದಾರ್ಥಗಳನ್ನ ತಿನ್ನಲು ಇಂದಿನಿಂದಲೆ ಪ್ರಾರಂಭಿಸಿ. ಕೆಲವು ಹುರಿದ ಆಹಾರಗಳು ರುಚಿ ಹೆಚ್ಚಿಸುವುದರ ಜತೆಗೆ, ಮೆದುಳಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಹುರಿದ ಬಾದಾಮಿ: ಹುರಿದ ಬಾದಾಮಿಯಲ್ಲಿ ವಿಟಮಿನ್​ ಇ ಸಮೃದ್ಧವಾಗಿದೆ. ಇದು ಉತ್ಕರ್ಷಣ ನಿರೋಧಕವಾಗಿದ್ದು ಅದು ಮೆದುಳಿನ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಬಾದಾಮಿಯಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಫೈಬರ್ ಕೂಡ ಇದೆ.

ಸಿಹಿ ಗೆಣಸು: ಸಿಹಿ ಗೆಣಸಿನಲ್ಲಿ ಬೀಟಾ-ಕ್ಯಾರೋಟಿನ್​​​ ಹೆಚ್ಚಾಗಿದೆ. ಇದನ್ನು ದೇಹದೊಳಗೆ ವಿಟಮಿನ್ ಎ ಆಗಿ ಪರಿವರ್ತಿಸಬಹುದು. ಮೆದುಳಿನ ಕಾರ್ಯ ಮತ್ತು ತೀಕ್ಷ್ಣ ದೃಷ್ಟಿಗೆ ವಿಟಮಿನ್ ಎ ಮುಖ್ಯವಾಗಿದೆ.

ಹುರಿದ ಬ್ರೊಕೊಲಿ: ಹುರಿದ ಬ್ರೊಕೊಲಿಯು ವಿಟಮಿನ್ ಕೆ ನಂತಹ ಪೋಷಕಾಂಶವನ್ನು ಹೊಂದಿದೆ. ಮೆದುಳಿನ ಆರೋಗ್ಯ ಮತ್ತು ಚುರುಕಾಗಿ ಕಾರ್ಯ ನಿರ್ವಹಿಸಲು ಇದು ಮುಖ್ಯವಾಗಿದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್​​ ಅನ್ನು ಹೊಂದಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಹುರಿದ ವಾಲ್​​ನಟ್ಸ್​​​: ಹುರಿದ ವಾಲ್​ನಟ್ಸ್​​​ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿದೆ. ಅಲ್ಲದೆ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್​ಗಳನ್ನು ಹೊಂದಿರುತ್ತವೆ. ಈ ಪೋಷಕಾಂಶಗಳು ಮೆದುಳಿನ ಕೋಶಗಳನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net