

ಇದೊಂದು ಸಣ್ಣ ನಗರ..ಇಲ್ಲಿ ಇಬ್ಬರೇ ನಿವಾಸಿಗಳು. ಆದರೆ ಕೊವಿಡ್-19 ವಿರುದ್ಧ ಅದೆಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆಂದರೆ ಉಳಿದವರಿಗೂ ಮಾದರಿ...!
ಇಟಲಿಯ ನಾರ್ಟೋಸ್ ಎಂಬುದು ಪುಟ್ಟ ನಗರ. ಹಾಗೇ ಅಲ್ಲಿ ಇರುವವರು ಇಬ್ಬರು ನಿವೃತ್ತ ವೃದ್ಧರು. ಜಿಯೋವಾನಿ ಕರಿಲ್ಲಿ (82) ಮತ್ತು ಜಿಯಾಂಪಿಯೊ ನೊಬಿಲಿ (74) ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆ ಸ್ಥಳದಲ್ಲಿ ಅವರಿಬ್ಬರೇ ನಿವಾಸಿಗಳಾಗಿದ್ದರೂ ಕರೊನಾ ಬಾರದಂತೆ ಸಿಕ್ಕಾಪಟೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಪರಸ್ಪರ ಭೇಟಿ ಆಗುವಾಗ ಇಬ್ಬರೂ ಮಾಸ್ಕ್ ಹಾಕಿಕೊಂಡೇ ಇರುತ್ತಾರೆ. ಸಾಮಾಜಿಕ ಅಂತರ ನಿಯಮವನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ದೂರವೇ ನಿಂತು ಮಾತನಾಡುತ್ತಾರೆ. ಇದನ್ನೂ ಓದಿ: VIDEO| ಹಾಲುಕುಡಿಯುತ್ತ ಅಮ್ಮನ ಮಡಿಲಲ್ಲಿ ಮಲಗಿದ್ದ ಶ್ವಾನಮರಿಗಳನ್ನ ಹೊತ್ತೊಯ್ದ ಚಿರತೆ!
ಉಂಬ್ರಿಯಾದ ಪೆರುಜಿಯಾ ಪ್ರಾಂತ್ಯದಲ್ಲಿ ಸುಮಾರು 900 ಮೀ.ಎತ್ತರದಲ್ಲಿ ಈ ನಾರ್ಟೋಸ್ ಸಿಟಿ ಇದ್ದು ಅಲ್ಲಿಗೆ ತಲುಪುವುದೂ ತುಂಬ ಕಷ್ಟ. ನನಗಂತೂ ಕರೊನಾ ವೈರಸ್ ಎಂದರೆ ಸತ್ತೇ ಹೋಗುವಷ್ಟು ಭಯ. ನಾನು ಒಬ್ಬನೇ ಬೇರೆ ಇದ್ದೇನೆ. ಅನಾರೋಗ್ಯಕ್ಕೀಡಾದರೆ ನೋಡುವವರು ಯಾರು? ಆದರೆ ಕುರಿ ಸಾಕಣೆ, ಕೆಲವು ಬಳ್ಳಿಗಳು, ಜೇನುಗೂಡು ಮತ್ತು ಹಣ್ಣಿನ ತೋಟಗಳ ನಿರ್ವಹಣೆಗಾಗಿ ಇಲ್ಲಿಯೇ ವಾಸಿಬೇಕಾಗಿದೆ. ಈ ಜೀವನವನ್ನು ನಾನು ತುಂಬ ಎಂಜಾಯ್ ಮಾಡುತ್ತಿದ್ದೇನೆ ಎಂದು ಕರಿಲ್ಲಿ ಹೇಳಿದ್ದಾರೆ.
ಕರೊನಾ ಇರಲಿ, ಬಿಡಲಿ ಅದಕ್ಕೆ ಸಂಬಂಧಪಟ್ಟ ನಿಯಮಗಳನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದು ಇಬ್ಬರೂ ಹೇಳಿದ್ದಾರೆ. ಇಟಲಿಯಲ್ಲಿ 3.9 ಲಕ್ಷಕ್ಕೂ ಅಧಿಕ ಕರೊನಾ ಪ್ರಕರಣಗಳು ಇದ್ದು, 2.47 ಮಂದಿ ಚೇತರಿಸಿಕೊಂಡಿದ್ದಾರೆ. ಸುಮಾರು 36,427 ಜನರು ಕರೊನಾದಿಂದ ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್)