VIDEO| ಹಾಲುಕುಡಿಯುತ್ತ ಅಮ್ಮನ ಮಡಿಲಲ್ಲಿ ಮಲಗಿದ್ದ ಶ್ವಾನಮರಿಗಳನ್ನ ಹೊತ್ತೊಯ್ದ ಚಿರತೆ!

cheetha dog
Published on

ಉತ್ತರಕನ್ನಡ: ಜನವಸತಿ ಪ್ರದೇಶಕ್ಕೆ ಬಂದ ಚಿರತೆಯು ತಾಯಿ ಮಡಿಲಲ್ಲಿ ಹಾಲುಕುಡಿಯುತ್ತಾ ಮಲಗಿದ್ದ ನಾಯಿಮರಿಗಳನ್ನು ಹೊತ್ತೊಯ್ಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರವಾರದ ಬೈತಖೋಲ್ ಇಂಡಿಯನ್ ಆಯಿಲ್ ಸ್ಟೋರೆಜ್ ಕಚೇರಿ ಬಳಿ ತಡರಾತ್ರಿ ನಾಯಿಯೊಂದು ತನ್ನ ಮರಿಗಳಿಗೆ ಹಾಲುಣಿಸುತ್ತ ಮಲಗಿತ್ತು. ಈ ವೇಳೆ ಅಲ್ಲಿಗೆ ಕಳ್ಳಹೆಜ್ಜೆಯನ್ನಿಟ್ಟು ಬಂದ ಚಿರತೆಯು ಮರಿಗಳನ್ನು ಹೊತ್ತೊಯ್ದಿದೆ. ಚಿರತೆ ಪ್ರತ್ಯಕ್ಷದಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net