ಮುಂಬೈ: ನಟ ದರ್ಶನ್ ಅಭಿನಯದ ಐರಾವತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ ಹೆಸರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿದೆ. ಏಕೆಂದರೆ, ಈ ಚೆಲುವೆಯ ಬಾತ್ರೂಮ್ ವಿಡಿಯೋ ಲೀಕ್ ಆಗಿದೆ.
ಊರ್ವಶಿ ಅವರು ಸ್ನಾನಕ್ಕೆ ರೆಡಿಯಾಗುತ್ತಿರುವ 23 ಸೆಕೆಂಡುಳ್ಳ ಬಾತ್ರೂಮ್ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋನಲ್ಲಿ ಕುರ್ತಾ ಧರಿಸಿರುವ ಊರ್ವಶಿ, ಸ್ನಾನ ಮಾಡಲೆಂದು ಬಾತ್ರೂಮ್ಗೆ ಬರುತ್ತಾರೆ. ಅವರ ಕೊರಳಿನಲ್ಲಿ ತಾಳಿ ರೀತಿ ಕಾಣುವ ಸರವೂ ಇದೆ. ಊರ್ವಶಿ ಟವೆಲ್ ತೆಗೆದು ಹ್ಯಾಂಗರ್ಗೆ ನೇತುಹಾಕಿ ತಮ್ಮ ಬಟ್ಟೆ ಕಳೆಯಲು ಮುಂದಾಗುತ್ತಾರೆ ಅಲ್ಲಿಗೆ ವಿಡಿಯೋ ಕೊನೆಯಾಗುತ್ತದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಇದು ಪಬ್ಲಿಸಿಟಿ ಸ್ಟಂಟ್ಗಾಗಿ ವೈರಲ್ ಮಾಡಿರುವ ವಿಡಿಯೋ ಎಂದು ಹಲವು ನೆಟ್ಟಿಗರು ಕಾಮೆಂಟ್ಗಳ ಮೂಲಕ ಕಿಡಿಕಾರಿದ್ದಾರೆ. ಯಾವುದೋ ಸಿನಿಮಾದ ಪ್ರಮೋಷನ್ಗಾಗಿ ಊರ್ವಶಿನೇ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲ ಚರ್ಚೆಗಳ ನಡುವೆ ಇತ್ತೀಚೆಗಷ್ಟೇ ಊರ್ವಶಿ ಅವರು ಈ ವಿಚಾರವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವೈರಲ್ ಆಗಿರುವ ಆಡಿಯೋದಲ್ಲಿ ಊರ್ವಶಿ ಅವರು ತಮ್ಮ ಮ್ಯಾನೇಜರ್ ವಿರುದ್ಧ ಕೆಂಡ ಕಾರಿದ್ದಾರೆ. ನೀವು ವಿಡಿಯೋ ನೋಡಿದ್ದೀರಾ? ಎಂದು ಆರಂಭದಲ್ಲಿ ಊರ್ವಶಿ ಪ್ರಶ್ನೆ ಮಾಡಿದ್ದಾರೆ. ಇಂತಹ ವಿಡಿಯೋಗಳು ಹೇಗೆ ಹೊರಬರುತ್ತಿವೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಾನು ತಕ್ಷಣ ಅವರ ಜೊತೆ ಮಾತನಾಡಬೇಕು ಎಂದು ಹೇಳಿದ್ದಾರೆ. ಆದರೆ, ಅವರ ಹೆಸರನ್ನು ಊರ್ವಶಿ ಹೇಳಿಲ್ಲ. ಇದೇ ಸಂದರ್ಭದಲ್ಲಿ ಊರ್ವಶಿ ಅವರ ಮ್ಯಾನೇಜರ್ ಮಾತನಾಡಿ, ಇಂತಹ ವಿಡಿಯೋಗಳು ಹೇಗೆ ಲೀಕ್ ಆಗುತ್ತವೆ ಎಂದು ನನಗೆ ತಿಳಿದಿಲ್ಲ. ನಾವು ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.
Urvashi Rautela Schools Her Manager After Bathroom Video Gets Leaked | Watch#UrvashiRautela pic.twitter.com/RcZaTyGND7
— News18 Showsha (@News18Showsha) July 18, 2024
ಇನ್ನೂ ವೈರಲ್ ಆಡಿಯೋ ಅಸಲಿನಾ? ಅಥವಾ ನಕಲಿನಾ? ಎಂಬ ಅನುಮಾನ ನೆಟ್ಟಿಗರಲ್ಲಿದೆ. ಆಡಿಯೋವನ್ನು ಜನ ನಂಬುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಿನಿಮಾ ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ನೆಟ್ಟಿಗರು ದೂಷಿಸಿದ್ದಾರೆ.
ಊರ್ವಶಿ ಅವರ ವಿಚಾರಕ್ಕೆ ಬರುವುದಾದರೆ, ಮಾಡೆಲ್ ಆಗಿ ವೃತ್ತಿಜಿವನ ಆರಂಭಿಸಿದ ಊರ್ವಶಿ, ಸನ್ನಿ ಡಿಯೋಲ್ ನಟನೆಯ ಸಿಂಗ್ ಸಾಬ್ ದಿ ಗ್ರೇಟ್ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಆ ಬಳಿಕ ಕನ್ನಡದ ಐರಾವತ ಸೇರಿದಂತೆ ಹಿಂದಿ ಚಿತ್ರಗಳಲ್ಲಿ ನಟಿಸಿ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಇದಲ್ಲದೆ ಕ್ರಿಕೆಟಿಗ ರಿಷಭ್ ಪಂತ್ ಅವರ ಜೊತೆಗಿನ ನಂಟಿನ ವಿಚಾರವಾಗಿಯೂ ನಟಿ ಸದ್ದು ಮಾಡಿದ್ದರು. (ಏಜೆನ್ಸೀಸ್)
ಖ್ಯಾತ ನಟಿಯ ಬಾತ್ರೂಮ್ ವಿಡಿಯೋ ಲೀಕ್; ಪ್ರಚಾರಕ್ಕಾಗಿ ಹೀಗೆ ಮಾಡಿದ್ರಾ?
ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡದಿರಲು ಇದೇ ಪ್ರಮುಖ ಕಾರಣ? : ಆಟಗಾರರ ಮೇಲೆ ಬಿಸಿಸಿಐ ನಿಗಾ