ಆಧಾರ್​ ಕಾರ್ಡ್ ಬಳಕೆದಾರರೇ ಇದೇ ನಿಮಗೆ ಕಡೆಯ ದಿನಾಂಕ​! ತಪ್ಪಿದರೆ ರದ್ದಾಗಬಹುದು ಇರಲಿ ಎಚ್ಚರ

blank

ಬೆಂಗಳೂರು: ಪ್ರತಿಯೊಬ್ಬ ಭಾರತೀಯರಿಗೂ ಬಹಳ ಮುಖ್ಯವಾದ ದಾಖಲಾತಿ ಎಂದರೆ ಅದು ಆಧಾರ್ ಕಾರ್ಡ್​. ಒಂದು ರೀತಿ ಎಲ್ಲಾ ಡಾಂಕ್ಯೂಮೆಂಟ್​ಗಳ ಕಾರ್ಡ್​ಗಳಿಗೆ ಅಧಿಪತಿಯೇ ಈ ಆಧಾರ್​ ಕಾರ್ಡ್​. ಇದೊಂದು ಚೀಟಿ ಸರಿಯಿದ್ದರೇ ಉಳಿದೆಲ್ಲವೂ ಕೂಡ ಬಹಳ ಸರಳ ಹಾಗೂ ಸುಲಭ. ಹೌದು, ನಾವು ಪಡಿತರ ಚೀಟಿ, ವಾಹನ ಪರವಾನಗಿ, ಪಾನ್ ಕಾರ್ಡ್​, ಬ್ಯಾಂಕ್ ಖಾತೆ ಹೀಗೆ ಹಲವು ದಾಖಲಾತಿ ಪಡೆಯಲು ಸೇವಾ ಕೇಂದ್ರಗಳಿಗೆ ಭೇಟಿ ಕೊಟ್ಟಾಗ ಅವರು ನಮ್ಮನ್ನು ಮೊದಲು ಕೇಳುವುದೇ ‘ಎಲ್ಲಿ ನಿಮ್ಮ ಆಧಾರ್​ ಕೊಡಿ’ ಎಂದು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ ಮಹತ್ವ ಬಹಳ ಇದೆ. ಆದ್ರೆ, ಈ ಮಧ್ಯೆ ಕೇಂದ್ರ ನೀಡಿರುವ ಗಡುವು ಇದೀಗ ಜನಸಾಮಾನ್ಯರಲ್ಲಿ ತಲ್ಲಣ ಮೂಡಿಸಿದೆ.

ಇದನ್ನೂ ಓದಿ: ಈ ನಟರ ಜತೆ ಅಭಿನಯಿಸಲು ಬಹಳ ಭಯವಾಗ್ತಿತ್ತು: ಶಾಕಿಂಗ್ ಹೇಳಿಕೆ ಕೊಟ್ಟ ‘ಆ್ಯಕ್ಷನ್​​ ಕ್ವೀನ್​’

ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಹಲವಾರು ಯೋಜನೆ, ಸೌಕರ್ಯಗಳ ಸದುಪಯೋಗ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು, ಒಂದು ಸಣ್ಣ ಸಿಮ್ ಕಾರ್ಡ್​ ಖರೀದಿ ಮಾಡಲು ಈ ಆಧಾರ್​ ಕಾರ್ಡ್ ಅಗತ್ಯವಿದೆ. ಇದು ಸಾರ್ವಜನಿಕರ ಜೀವನದಲ್ಲಿ ಬಹಳ ದೊಡ್ಡ ಪಾತ್ರವನ್ನೇ ನಿರ್ವಹಿಸುತ್ತದೆ. ಒಬ್ಬ ವ್ಯಕ್ತಿಯ ಹೆಸರು, ವಿಳಾಸ, ಆಧಾರ್​ ಸಂಖ್ಯೆ, ವಯಸ್ಸನ್ನು ಒಳಗೊಂಡಿರುವ ಆಧಾರ್​ ಕಾರ್ಡ್​ ತಿದ್ದುಪಡಿ ತುಂಬ ಅಗತ್ಯವಾದುದು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡ ಕೇಂದ್ರ ಸರ್ಕಾರ ಜನರಿಗೆ ತಮ್ಮ ಆಧಾರ್​ ಚೀಟಿಯಲ್ಲಿ ಅಗತ್ಯ ತಿದ್ದುಪಡಿಯನ್ನು ಮಾಡಿಕೊಳ್ಳಲು ಇದೀಗ ಗಡುವು ನೀಡಿದೆ.

ಎಚ್ಚರಿಕೆಯ ಗಂಟೆ

ಈ ಒಂದು ಬದಲಾವಣೆ ಮಾಡಿಕೊಳ್ಳಲು ಇದೇ ಕಡೆಯ ದಿನಾಂಕವಾಗಿದ್ದು, ಶೀಘ್ರವೇ ಸರಿಪಡಿಸಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ನಿಮ್ಮ ಆಧಾರ್​ ಕಾರ್ಡ್​ ರದ್ದಾಗುವುದರಲ್ಲಿ ಆಶ್ಚರ್ಯವಿಲ್ಲ. ಯುಐಡಿಎಐ (UIDAI) ಕೆಲವು ದಿನಗಳಿಂದ ಆಧಾರ್ ಕಾರ್ಡ್ ಅನ್ನು ನವೀಕರಿಸಲು ಸೂಚಿಸುತ್ತಿದೆ. ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ್ ನವೀಕರಿಸದವರಿಗೆ ಈ ಗಡುವು ಅನ್ವಯಿಸುತ್ತದೆ. ಈ ವರ್ಷದ ಡಿಸೆಂಬರ್ 14 ರವರೆಗೆ ಉಚಿತ ನವೀಕರಣ ಲಭ್ಯವಿದ್ದು, ಅದರ ನಂತರ, ನವೀಕರಿಸದವರ ಆಧಾರ್ ಕಾರ್ಡ್‌ಗಳನ್ನು ಸರ್ಕಾರ ರದ್ದುಗೊಳಿಸಬಹುದು ಎಂಬ ಎಚ್ಚರಿಕೆಯ ಗಂಟೆ ಕೇಳಿಬಂದಿದೆ. ಆದ್ದರಿಂದ ಗಡುವಿನ ಮೊದಲು ನವೀಕರಿಸದ ಆಧಾರ್ ಕಾರ್ಡ್‌ಗಳನ್ನು ಜನಸಾಮಾನ್ಯರು ಕೂಡಲೇ ನವೀಕರಿಸುವುದು ಬಹಳ ಮುಖ್ಯ. ಈ ಸಾಲಿನಲ್ಲಿ ಬಹಳ ಜನರಿದ್ದು, ಇನ್ನೂ ಅಪ್‌ಡೇಟ್ ಮಾಡದೇ ದಿನವನ್ನು ಮುಂದೂಡುತ್ತಿದ್ದಾರೆ.

ಮೈ ಆಧಾರ್’ ಪೋರ್ಟಲ್​

ಆಧಾರ್ ಕಾರ್ಡ್‌ನಲ್ಲಿ ಫೋಟೋ ಮತ್ತು ವಿಳಾಸವನ್ನು ಬದಲಾಯಿಸಲು ಬಯಸುವವರು ತಕ್ಷಣ ಆನ್‌ಲೈನ್‌ನಲ್ಲಿ ಪ್ರಸ್ತುತ ಉಚಿತವಾಗಿ ನವೀಕರಿಸಬಹುದಾಗಿದೆ. ‘ಮೈ ಆಧಾರ್’ ಪೋರ್ಟಲ್ ಮೂಲಕ ಈ ಉಚಿತ ಸೇವೆಗಳು ಲಭ್ಯವಿವೆ. ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ನಿವಾಸ ಪ್ರಮಾಣಪತ್ರ, ಉದ್ಯೋಗ ಖಾತ್ರಿ ಯೋಜನೆ ಜಾಬ್ ಕಾರ್ಡ್, ಲೇಬರ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಸಿಜಿಎಚ್‌ಎಸ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್‌ನಂತಹ ದಾಖಲೆಗಳನ್ನು ಬಳಸಿಕೊಂಡು ಆಧಾರ್ ಅನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದು. ಅವಧಿ ಮುಗಿದ ನಂತರ ನೀವು ನವೀಕರಿಸಿದರೆ, ಇದಕ್ಕೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹತ್ತು ವರ್ಷಗಳಷ್ಟು ಹಳೆಯದಾದ ಆಧಾರ್‌ನಲ್ಲಿ ಮಾಹಿತಿಯನ್ನು ನವೀಕರಿಸಲು ಯುಐಡಿಎಐ ಡಿಸೆಂಬರ್ 14ರವರೆಗೆ ಸಮಯ ನೀಡಿದೆ.

ಈ ಗಡುವನ್ನು ಈಗಾಗಲೇ ಮೂರು ಬಾರಿ ವಿಸ್ತರಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಈ ಹಿಂದೆ ಮೊದಲು ಮಾರ್ಚ್ 14, ನಂತರ ಜೂನ್ 14, ಅದಾದ ಬಳಿಕ ಸೆಪ್ಟೆಂಬರ್ 14, ಮತ್ತೀಗ ಡಿಸೆಂಬರ್ 14ರವರೆಗೆ ಅವಕಾಶ ನೀಡಲಾಗಿದೆ. ಉಚಿತ ಆಧಾರ್ ನವೀಕರಣದ ಗಡುವನ್ನು ಕೇಂದ್ರ ಮತ್ತೊಮ್ಮೆ ವಿಸ್ತರಿಸುತ್ತದೆಯೇ ಎಂಬುದು ಸದ್ಯ ಅನುಮಾನ ಎಂದೇ ಹೇಳಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

ಮೊದಲು ನಿಮ್ಮ ಮೊಬೈಲ್​ನಲ್ಲಿ ‘ಮೈ ಆಧಾರ್’ ಪೋರ್ಟಲ್​ ತೆರೆದರೆ ಅಲ್ಲಿ ಅನೇಕ ಆಯ್ಕೆಗಳು ನಿಮಗೆ ಕಾಣಸಿಗುತ್ತವೆ.

  • ಮೊದಲು https://myaadhaar.uidai.gov.in ವೆಬ್‌ಸೈಟ್ ತೆರೆಯಿರಿ.
  • ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾಗಳನ್ನು ನಮೂದಿಸಿ. ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಓಟಿಪಿ ಸಂಖ್ಯೆಯನ್ನು ನಮೂದಿಸುವ ಮೂಲಕ ಲಾಗಿನ್ ಮಾಡಿ.
  • ಡಾಕ್ಯುಮೆಂಟ್ ನವೀಕರಣ ವಿಭಾಗಕ್ಕೆ ಹೋಗಿ ಮತ್ತು ನಿಮ್ಮ ವೈಯಕ್ತಿಕ ವಿವರಗಳನ್ನು ಪರಿಶೀಲಿಸಿ.
  • ಬದಲಾವಣೆಯ ಅಗತ್ಯವಿರುವ ವಿವರಗಳನ್ನು ಮಾತ್ರ ಗುರುತಿಸಿ ಮತ್ತು ಪರಿಶೀಲನೆಗಾಗಿ ಸಂಬಂಧಿತ ಮೂಲ ದಾಖಲೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ.
  • ಇದರಲ್ಲಿ ಕೊಡಲಾದ ಸೇವಾ ವಿನಂತಿ ಸಂಖ್ಯೆಯನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ, ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರಬಹುದು,(ಏಜೆನ್ಸೀಸ್).

 

Share This Article

ಬಿಸಿ..ಬಿಸಿ ಚಹಾ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ.. ಹಲ್ಲುಗಳಿಗೆ ಎಷ್ಟು ಹಾನಿಕಾರಕ ಗೊತ್ತಾ? Health Tips

Health Tips: ಬಿಸಿ..ಬಿಸಿ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...ಊಟ ಇಲ್ಲದಿದ್ದರೂ, ತಡವಾದರೂ ಒಂದು…

honeymoon destinations : 2024 ರಲ್ಲಿ ನವವಿವಾಹಿತರನ್ನು ಆಕರ್ಷಿಸಿದ ನೆಚ್ಚಿನ ಹನಿಮೂನ್ ತಾಣಗಳು ಇವು..!

 honeymoon destinations  : ವ್ಯಕ್ತಿಯ ಆದ್ಯತೆಗಳು ಮತ್ತು ಆಯ್ಕೆಗಳು ವರ್ಷಗಳಲ್ಲಿ ಬದಲಾಗುತ್ತವೆ. ಈಗ ನಾವು 2024…

Kitchen Hacks: ಹಣ್ಣು, ತರಕಾರಿಗಳ ಸಿಪ್ಪೆ ಎಸೆಯುತ್ತಿದ್ದೀರಾ? ಹೀಗೆ ಮರುಬಳಕೆ ಮಾಡಬಹುದು ನೋಡಿ

Kitchen Hacks: ಹಣ್ಣುಗಳು, ತರಕಾರಿಗಳು ಆರೋಗ್ಯಕ್ಕೆ ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಇವುಗಳನ್ನು ಬಳಸಿದ…