ಇದು 50 ಕೋಟಿ ರೂ. ವೂಲ್ಫ್‌ಡಾಗ್ ಅಲ್ಲ! ಸತೀಶ್‌ ನಕಲಿ ಹೇಳಿಕೆ ಬಯಲು ಮಾಡಿದ ED|Dog

dog
Published on

Dog: ಬೆಂಗಳೂರಿನ ಶ್ವಾನ ಪ್ರೇಮಿ ಎಸ್‌.ಸತೀಶ್‌ ಅವರು 50 ಕೋಟಿ ರೂ.ಗೆ ವಿಶ್ವದ ಅಪರೂಪದ ನಾಯಿಯಾದ ವೂಲ್ಫ್‌ಡಾಗ್ ಖರೀದಿಸಿದ್ದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆತ ನೀಡಿರುವ ಹೇಳಿಕೆಗಳು ಸುಳ್ಳು ಎಂದು ಬಯಲು ಮಾಡಿದ್ದಾರೆ. ಡಾಗ್ ಸತೀಶ್ ನ ಬೆಂಗಳೂರಿನ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ ಬಳಿಕ ಆತ ಬೆಲೆಬಾಳುವ ನಾಯಿಗಳನ್ನು ಬೇರೆಯವರಿಂದ ಬಾಡಿಗೆ ಪಡೆದು ವಿಡಿಯೋ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.

ಶ್ವಾನ ಪ್ರೇಮಿ ಎಸ್‌.ಸತೀಶ್‌ 50 ಕೋಟಿ ರೂಪಾಯಿ ಬೆಲೆಬಾಳುವ ದುಬಾರಿ ವೂಲ್ಫ್‌ ಡಾಗ್‌ಅನ್ನು ಖರೀದಿ ಮಾಡಿದ್ದೆ ಎಂದು ಎಲ್ಲರಿಗೂ ತಿಳಿಸಿದ್ದ. ಮಾಧ್ಯಮಗಳಲ್ಲೂ ಈ ವಿಚಾರ ತುಂಬಾ ವೈರಲ್‌ ಆಗಿತ್ತು. ಇದೀಗ ಆತನ ವ್ಯವಹಾರ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ಬಗ್ಗೆ ಮಾಹಿತಿ ಪಡೆಯಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂದಾಗಿದ್ದಾಗ ಇಡೀ ವ್ಯವಹಾರ ಬಯಲಾಗಿದೆ. ಇಡಿ ದಾಳಿ ವೇಳೆ ಆತನೊಬ್ಬ ವಂಚಕ ಹಾಗೂ ಸುಳ್ಳು ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋದು ಬೆಳಕಿಗೆ ಬಂದಿದೆ.

ಸತೀಶ್ ಅವರು ಅಮೆರಿಕದಿಂದ ಬಂದಿರುವ ಅಪರೂಪದ ತೋಳನಾಯಿ ವೂಲ್ಫ್‌ಡಾಗ್ ಅನ್ನು ಖರೀದಿಸಿರುವುದಾಗಿ ಹೇಳಿದ್ದರು. ಈ ನಾಯಿ ತೋಳ ಮತ್ತು ಕಕೇಶಿಯನ್ ಶೆಫರ್ಡ್‌ನ ಹೈಬ್ರಿಡ್ ತಳಿಯಾಗಿರುವುದರಿಂದ ಇದು ತುಂಬಾ ದುಬಾರಿಯಾಗಿದೆ ಎಂದು ಅವರು ಹೇಳಿದ್ದರು. ಅಂತಹ ನಾಯಿ ಭಾರತಕ್ಕೆ ಮೊದಲ ಬಾರಿಗೆ ಬಂದಿದೆ ಎಂದು ಅವರು ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಮನೆ ಮೇಲೆ ಇಡಿ ದಾಳಿ

(ಏಜೆನ್ಸೀಸ್)

ಆದರೆ ಈಗ ಇದೆಲ್ಲದರ ಸತ್ಯ ಹೊರಬಂದಿದೆ. ಇಡಿ ಅವರ ಮನೆ ಮೇಲೆ ದಾಳಿ ಮಾಡಿದಾಗ, ತನಿಖೆಯ ಸಮಯದಲ್ಲಿ ಅವರು ನಿಜವಾಗಿಯೂ 50 ಕೋಟಿ ರೂ. ಮೌಲ್ಯದ ನಾಯಿಯನ್ನು ಖರೀದಿಸಿದ್ದಾರೆ ಎಂದು ಸಾಬೀತುಪಡಿಸುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಈ ಸುಳ್ಳನ್ನು ಹರಡಲು ಸತೀಶ್ ಕೆಲವು ಮಾಧ್ಯಮ ವ್ಯಕ್ತಿಗಳೊಂದಿಗೆ ಸಹಕರಿಸಿದ್ದಾರೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net